News

ಐದು ಮಕ್ಕಳಿಗೆ ಪುನೀತ್ ಹೆಸರು ನಾಮಕರಣ

ಐದು ಮಕ್ಕಳಿಗೆ ಪುನೀತ್ ಹೆಸರು ನಾಮಕರಣ
  • PublishedMarch 16, 2022

ಕರುನಾಡ ರತ್ನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಜೇಮ್ಸ್ ಸಿನಿಮಾ ತೆರೆಗೆ ಬರಲು ಸಿದ್ಧವಾಗಿದೆ…ಅದಷ್ಟೇ ಅಲ್ಲದೆ ನಾಳೆ ಪವರ್ ಸ್ಟಾರ್ ಹುಟ್ಟುಹಬ್ಬ ಕೂಡ ..ಅಪ್ಪು ಹುಟ್ಟುಹಬ್ಬವನ್ನು ವಿಭಿನ್ನವಾಗಿ ಆಚರಿಸಲು ಅವರ ಅಭಿಮಾನಿಗಳು ಸಿದ್ಧವಾಗಿದ್ದು ಅಭಿಮಾನಿಗಳು ಮಾತ್ರವಲ್ಲದೆ ಕರ್ನಾಟಕದ ಜನರು ಕೂಡ ಅಪ್ಪು ಹುಟ್ಟುಹಬ್ನವನ್ನ ತಮ್ಮದೇ ಆದ ರೀತಿಯಲ್ಲಿ ಸೆಲೆಬ್ರಿಟ್ ಮಾಡುತ್ತಿದ್ದಾರೆ‌‌‌…

ಭಾರತಿನಗರ ನಾಗರೀಕರ ವೇದಿಕೆಯಿಂದ ಸರ್ವಜ್ಞನಗರದಲ್ಲಿನ ಕಾಕ್ಸ್‌ಟೌನ್ ಹೆರಿಗೆ ಆಸ್ಪತ್ರೆಯಲ್ಲಿ ವಿಭಿನ್ನವಾಗಿ ಅಪ್ಪು ಹುಟ್ಟುಹಬ್ಬವನ್ನ ಆಚರಣೆ ಮಾಡಲಾಗಿದೆ…5 ಗಂಡು ಮಕ್ಕಳಿಗೆ ಪುನೀತ್ ರಾಜ್‍ಕುಮಾರ್ ಹೆಸರು ನಾಮಕರಣ ಮಾಡಲಾಗಿದ್ದು ಪುನೀತ್ ರಾಜ್‍ಕುಮಾರ್ ಸೋದರಿ ಪೂರ್ಣಿಮಾ, ಹಿರಿಯನಟಿ ತಾರಾ‌ ಅನುರಾಧ ಹಾಗು ಸ್ಥಳೀಯ ಮುಖಂಡ ರವಿ ಅವರಿಂದ ನಾಮಕರಣ ಕಾರ್ಯಕ್ರಮ ನಡೆದಿದೆ ..ಹೀಗೆ ಇನ್ನು ಭಿನ್ನ ವಿಭಿನ್ನವಾಗಿ ಅಪ್ಪು ಹುಟ್ಟುಹಬ್ಬವನ್ನ ಆಚರಣೆ ಮಾಡಲಾಗುತ್ತಿದೆ…

Written By
Kannadapichhar

Leave a Reply

Your email address will not be published. Required fields are marked *