IMDB ಬಹುನಿರೀಕ್ಷಿತ ಚಿತ್ರಗಳ ಪಟ್ಟಿಯಲ್ಲಿ ’45’ No.1
ಡಿಸೆಂಬರ್ ಕನ್ನಡ ಚಿತ್ರ ರಂಗಕ್ಕೆ ದೊಡ್ಡ ಹಬ್ಬ ಇದ್ದಂತೆ, ಸೂಪರ್ ಸ್ಟಾರ್ಸ್ ಗಳ ಸಿನಿಮಾ ಡಿಸೆಂಬರ್ ನಲ್ಲಿ ಬಿಡುಗಡೆಗೊಳ್ಳಲಿದೆ. ಅದರಲ್ಲಿ ಶಿವಣ್ಣ, ಉಪ್ಪಿ ದಾದ ಹಾಗೂ ರಾಜ್ ಬಿ ಶೆಟ್ಟಿ ನಟನೆಯ 45 ಕೂಡ ಒಂದು.
ಇದೀಗ ಈ ಚಿತ್ರವು ಐಎಂಡಿಬಿ ( ಇಂಟರ್ನೆಟ್ ಮೂವಿ ಡೇಟಾ ಬೇಸ್) ಯಲ್ಲಿ ಅತ್ಯಂತ ನೀರಿಕ್ಷಿತ ಸಿನಿಮಾವಾಗಿ ಹೊರ ಹೊಮ್ಮಿದೆ.ಈ ಡೇಟಾ ಬೇಸ್ ಮೂವಿಸ್, ಕಿರುತರೆ ಕಾರ್ಯಕ್ರಮಗಳು ಹೀಗೆ ಅನೇಕ ವಿಚಾರಗಳನ್ನು ಒಳಗೊಂಡಿರೋ ವಿಶ್ವದ ಅತ್ಯಂತ ದೊಡ್ಡ ಡೇಟಾ ಬೇಸ್. ಈಗ ಇದರಲ್ಲಿ 45 ಮೂವಿಯು ಭಾರತದಲ್ಲಿ ಮೊದಲ ಸ್ಥಾನದಲ್ಲಿದೆ.
ಚಿತ್ರವು ಡಿಸೆಂಬರ್ 25 ರಂದು ಬಿಡುಗಡೆ ಆಗಲಿದ್ದು ಈಗಾಗಲೇ ಸಿನಿಮಾದ ಹಾಡು ಎಲ್ಲರ ಮೊಬೈಲ್ ನಲ್ಲಿ ಗುನುಗುತ್ತಿದೆ. ಜೊತೆಗೆ ಮೂರು ಅದ್ಭುತ ಕಲಾವಿದರನ್ನು ಒಳಗೊಂಡಿರೋ ಚಿತ್ರವಾಗಿರುವುದರಿಂದ ಎಲ್ಲರ ಕುತೂಹಲ ಹೆಚ್ಚಾಗಿದೆ.