new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

’45’ ಚಿತ್ರದ ಟ್ರೈಲರ್ ಇಂದು ರಿಲೀಸ್

’45’ ಚಿತ್ರದ ಟ್ರೈಲರ್ ಇಂದು ರಿಲೀಸ್
  • PublishedDecember 15, 2025

ಕನ್ನಡ ಚಿತ್ರ ರಂಗಕ್ಕೆ ಈ ಡಿಸೆಂಬರ್ ಹಬ್ಬದ ತಿಂಗಳು ಅಂತಾನೆ ಹೇಳ್ಬೋದು. ಡೆವಿಲ್ ಯಿಂದ ಶುರುವಾದ ಈ ತಿಂಗಳಿನ ಸಿನಿ ಪಯಣದಲ್ಲಿ ಡಿಸೆಂಬರ್ 25 ರಂದು ಎರಡು ಬ್ಲಾಕ್ ಬಸ್ಟರ್ ಸಿನಿಮಾಗಳು ರಿಲೀಸ್ ಆಗಲು ರೆಡಿ ಆಗಿದೆ. ಸುದೀಪ್ ನಟನೆಯ ಮಾರ್ಕ್ ಒಂದು ಕಡೆ ಆದ್ರೆ ಉಪೇಂದ್ರ, ಶಿವಣ್ಣ, ರಾಜ್ ಬಿ. ಶೆಟ್ಟಿ ಯವರು ನಟಿಸಿರುವ ‘45‘ ಇನ್ನೊಂದು ಕಡೆ. ಒಂದು ರೀತಿಲಿ ಕ್ರಿಸ್ಮಸ್ ಹಬ್ಬಕ್ಕೆ ಗಿಫ್ಟ್ ಬಂದ ಹಾಗೇ ಬರ್ತಿದೆ.

ಇದೀಗ ’45’ ಸಿನಿಮಾವು ಚಿತ್ರದ ಟ್ರೈಲರ್ ಅನ್ನು ಇಂದು ರಾತ್ರಿ 8.01 ಕ್ಕೆ ಆನಂದ್ ಆಡಿಯೋ ಅವರ ಅಧಿಕೃತ ಯೌಟ್ಯೂಬ್ ಚಾನಲ್ ನಲ್ಲಿ ಬಿಡುಗಡೆ ಮಾಡಲು ಸಜ್ಜಾಗಿದೆ. ಕನ್ನಡದ ಸ್ಟಾರ್ ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಈ ಚಿತ್ರದ ಮೂಲಕ ಚಿತ್ರ ನಿರ್ದೇಶಕರಾಗಿ ಪಾದರ್ಪಣೆ ಮಾಡಲಿದ್ದಾರೆ.

ಈ ಕಾಂಬಿನೇಶನ್ ಅನ್ನು ನೋಡಲು ಸಿನಿ ಪ್ರಿಯರು ಕಾಯ್ತಾ ಇದ್ದಾರೆ.ಚಿತ್ರವು ಕನ್ನಡ ಸೇರಿದಂತೆ ತಮಿಳು, ತೆಲುಗು, ಮಲಯಾಳಂ,ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಲು ಸಿದ್ದವಾಗಿದೆ. ಚಿತ್ರದ ಕಥೆ, ಹಾಡು, ನಿರ್ಮಾಣದ ಮೇಲೆ ನೀರಿಕ್ಷೆ ಹೆಚ್ಚಿದೆ.

Written By
Kannada Picchar

Leave a Reply

Your email address will not be published. Required fields are marked *