new updates News news updates ಪಿಚ್ಚರ್ EXCLUSIVE ಪಿಚ್ಚರ್ SPECIAL ಪಿಚ್ಚರ್ stories ಪಿಚ್ಚರ್ UPDATE

’45’ ಸಿನಿಮಾ ಅಪಪ್ರಚಾರದ ವಿರುದ್ಧ ಕಾನೂನು ಕ್ರಮ

’45’ ಸಿನಿಮಾ ಅಪಪ್ರಚಾರದ ವಿರುದ್ಧ ಕಾನೂನು ಕ್ರಮ
  • PublishedDecember 27, 2025

ಸಂಗೀತ ನಿರ್ದೇಶಕರಾಗಿ ಕನ್ನಡಿಗರ ಮನ ಗೆದ್ದಿದ್ದ ಅರ್ಜುನ್ ಜನ್ಯ ಅವರ ಚೊಚ್ಚಲ ನಿರ್ದೇಶನದಲ್ಲಿ ಮೂಡಿಬಂದ ’45’ ಸಿನಿಮಾ ಶಿವಣ್ಣ, ಉಪೇಂದ್ರ ಹಾಗೂ ರಾಜ್ ಅವರು ನಟಿಸಿರುವ ಚಿತ್ರ. ಈ ಸಿನಿಮಾ ತೆರೆಕಂಡ ಬಳಿಕ ಅಪಾರ ಮೆಚ್ಚುಗೆಗೆ ಪಾತ್ರವಾಯಿತು. ಆದರೆ ಸಿನಿಮಾದ ಯಶಸ್ಸಿನ ನಡುವೆಯೇ ಸಿನಿಮಾದ ಬಗ್ಗೆ ಉದ್ದೇಶಪೂರ್ವಕವಾಗಿಯೇ ಅಪಪ್ರಚಾರ ಮಾಡುತಿರುವ ವ್ಯಕ್ತಿಗಳು ಸಂಸ್ಥೆಗಳ ವಿರುದ್ಧ ಚಿತ್ರತಂಡ ಕಾನೂನಾತ್ಮಕವಾಗಿ ಕ್ರಮ ಕೈಗೊಂಡಿದೆ.

ಅಪಪ್ರಚಾರದ ವಿಚಾರವಾಗಿ ಬೆಂಗಳೂರು ನಗರದ ಘನ ನ್ಯಾಯಾಲಯದ 9ನೇ ಅಪರ ಸಿಟಿ ಸಿವಿಲ್ ಕೋರ್ಟ್ ನಲ್ಲಿ ಮಧ್ಯಂತರ ಆದೇಶವನ್ನು ಚಿತ್ರತಂಡ ಪಡೆದಿದ್ದಾರೆ ನ್ಯಾಯಾಲಯದ ಮಧ್ಯಂತರ ಆದೇಶದ ಪ್ರಕಾರ ” ’45’ ಚಿತ್ರದ ಕುರಿತು ಯಾವುದೇ ವ್ಯಕ್ತಿ, ಸಂಸ್ಥೆ. ಚಾನೆಲ್, ಸಾಮಾಜಿಕ ಜಾಲತಾಣದ ಖಾತೆದಾರರು ಅಥವಾ ಸಂಬಂಧಿತ ಪ್ಲಾಟ್ ಫಾರ್ಮ್ ಗಳು ಅವಹೇಳನಕಾರಿ, ಮಾನಹಾನಿಕಾರ, ಅಪಪ್ರಚಾರಾತ್ಮಕ ವಿಮರ್ಶೆಗಳು ಅಥವಾ ನೆಗೆಟಿವ್ ರೇಟಿಂಗ್ ಗಳು ಸೇರಿದಂತೆ ಚಿತ್ರಕ್ಕೆ ಹಾನಿ ಉಂಟು ಮಾಡುವ ವಿಷಯಗಳನ್ನು ಪ್ರಕಟಿಸುವುದು ಪ್ರಸಾರ ಮಾಡುವುದು ಅಥವಾ ಹರಡುವುದು ನಿರ್ಬಂಧಿಸಲಾಗಿದೆ”.

“ಜೊತೆಗೆ ಈಗಾಗಲೇ ಪ್ರಕಟಗೊಂಡಿರುವ ಇಂತಹ ಎಲ್ಲಾ ವಿಷಯಗಳನ್ನು ತೆಗೆದುಹಾಕಿ ನಿಷ್ಕ್ರಿಯಗೊಳಿಸುವಂತೆ ನ್ಯಾಯಾಲಯ ನಿರ್ದೇಶಿಸಿದೆ. ಚಿತ್ರದ ವಿರುದ್ಧ ಅಪಪ್ರಚಾರ ಪೋಸ್ಟ್ಗಳು ಪ್ರಕಟವಾಗುತ್ತಿರುವುದು ಚಿತ್ರತಂಡದ ಗಮನಕ್ಕೆ ಬಂದಿದೆ. ಈ ರೀತಿ ಅಪಪ್ರಚಾರದಿಂದ ಚಿತ್ರಕ್ಕೆ ಅಥವಾ ನಿರ್ಮಾಪಕರಿಗೆ ಉಂಟಾಗುವ ಯಾವುದೇ ರೀತಿಯ ಆರ್ಥಿಕ, ವಾಣಿಜ್ಯ ಹಾಗೂ ಗೌರವ ಹಾನಿಗೆ ಸಂಬಂಧಪಟ್ಟ ವ್ಯಕ್ತಿಗಳು ವೈಯಕ್ತಿಕವಾಗಿ ಸಂಪೂರ್ಣ ಹೊಣೆಗಾರರಾಗಿದ್ದು, ಅವರ ವಿರುದ್ಧ ಸಿವಿಲ್ ಹಾಗೂ ಕ್ರಿಮಿನಲ್ ಕಾನೂನುಗಳ ಅಡಿಯಲ್ಲಿ ಕಠಿಣ ಕ್ರಮ ಜರುಗಿಸಲು ಅವಕಾಶವಿದೆ. ಅಗತ್ಯವಿದ್ದಲ್ಲಿ ಸಂಬಂಧಪಟ್ಟವರ ವಿರುದ್ಧ ಎಫ್ಐಆರ್ ದಾಖಲಿಸಿ ಬಂಧನ ಸೇರಿದಂತೆ ಕಾನೂನು ಕ್ರಮ ಕೈಗೊಳ್ಳಲು ತಜ್ಞರ ಅಭಿಪ್ರಾಯ ಪಡೆಯಲಾಗಿದೆ” ಎಂದು ಚಿತ್ರತಂಡ ಪೋಸ್ಟ್ ಹಾಕಿಕೊಂಡಿದೆ.

ದೇಶದ ಅತ್ಯಂತ ಚೊಚ್ಚಲ ಪ್ರದರ್ಶನ ನೀಡುತ್ತಿರುವ ’45’ ಚಿತ್ರದ ವಿರುದ್ಧ ಉದ್ದೇಶಪೂರ್ವಕವಾಗಿ ಈ ರೀತಿಯ ಕೃತ್ಯಗಳು ನಡೆಯುತ್ತಿರುವುದನ್ನು ಗಮನಿಸಿದ ತಂಡ ಚಿತ್ರವನ್ನು ಕುಗ್ಗಿಸುವ ಪ್ರಯತ್ನವನ್ನು ತಿಳಿದು ಕಿಡಿಗೇಡಿಗಳ ವಿರುದ್ಧ ಕಾನೂನಾತ್ಮಕವಾಗಿ ಕ್ರಮವನ್ನು ಕೈಗೊಂಡಿದ್ದಾರೆ.

Written By
Kannada Picchar

Leave a Reply

Your email address will not be published. Required fields are marked *