News

ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ 71ನೇ ಜನ್ಮದಿನ

ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ 71ನೇ ಜನ್ಮದಿನ
  • PublishedSeptember 18, 2021

ಇಂದು ಸಾಹಸಸಿಂಹ ವಿಷ್ಣುವರ್ಧನ್ ಅವರ 71ನೇ ಜನ್ಮದಿನ. ವಿಷ್ಣುದಾದಾ ಇಂದು ನಮ್ಮೊಂದಿಗೆ ಇದಿದ್ದರೆ 71ನೇ ಹುಟ್ಟು ಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದರು ಆದರೆ ಅವರು ನಮ್ಮೊಂದಿಗಿಲ್ಲಾ ಅವರು ನಮ್ಮನ್ನಗಲಿ 12 ವರ್ಷಗಳೆ ಕಳೆದಿವೆ. ಆದರೆ ಅವರ ಅಭಿನಯದ ಸಿಸಿಮಾಗಳ ಮೂಲಕ ಸದಾ ನಮ್ಮೊಂದಿಗೆ ಜೀವಿಸುತ್ತಿದ್ದಾರೆ. ಅವರು ಬಲಗೈಗೆ ತೊಡುತ್ತಿದ್ದ ಖಡ್ಗ(ಕೈ ಬಳೆ) ಮತ್ತು ಅದೇ ಸ್ಟೈಲ್ ಅನ್ನು ಅವರ ಅಸಂಖ್ಯಾತ ಅಭಿಮಾನಿಗಳು ಈಗಲೂ ಫಾಲೊ ಮಾಡುತ್ತಾರೆ. ವಿಷ್ಣು ದಾದಾ ಎಂದರೆ ಎಷ್ಟೋ ಜನಗಳಿಗೆ ಸ್ಪೂರ್ತಿ.

ನಟ ವಿಷ್ಣುವರ್ಧನ್ ‘ವಂಶವೃಕ್ಷ’ ಎಂಬ ಚಿತ್ರದಲ್ಲಿ ಬಾಲನಟನಾಗಿ ಅಭಿನಯಿಸುವ ಮೂಲಕ ತಮ್ಮ ಸಿನಿಪಯಣ ಆರಂಭಿಸಿದರು. 1972ರಲ್ಲಿ ತೆರೆಕಂಡ ಪುಟ್ಟಣ್ಣ ಕಣಗಾಲ್ ನಿರ್ದೇಶನದ ‘ನಾಗರಹಾವು’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದರು. ಈ ಚಿತ್ರ ಸೂಪರ್ ಡೂಪರ್ ಹಿಟ್ ಆಗುವ ಮೂಲಕ ಹಲವು ದಾಖಲೆಗಳನ್ನು ಬರೆಯಿತು. ವಿಷ್ಣುವರ್ಧನ್ ಸುಮಾರು 220 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ.

ಅಭಿನಯ ಭಾರ್ಗವ ವಿಷ್ಣುವರ್ಧನ್ 2009 ಡಿಸೆಂಬರ್ 30ರಂದು ನಿಧನರಾದರು. ವಿಷ್ಣುವರ್ಧನ್ ಕೊನೆಯದಾಗಿ ನಟಿಸಿದ ಪಿ ವಾಸು ನಿರ್ದೇಶನದ ‘ಆಪ್ತರಕ್ಷಕ’ ಸಿನಿಮಾ 2010 ರಲ್ಲಿ ತೆರೆಕಂಡಿತ್ತು. ಇಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಸಿನಿಮಾ ಕಲಾವಿದರು ವಿಷ್ಣುವರ್ಧನ್ ಅವರ ಫೋಟೋ ಹಂಚಿಕೊಳ್ಳುವ ಮೂಲಕ ವಿಷ್ಣುವರ್ಧನ್ ಅವರನ್ನು ಸ್ಮರಿಸಿದ್ದಾರೆ.

****

Written By
Kannadapichhar

Leave a Reply

Your email address will not be published. Required fields are marked *