ಅಭಿಮಾನಿಗಳು ಅಂದಮೇಲೆ ತನ್ನ ನೆಚ್ಚಿನ ಸ್ಟಾರ್ಗಳನ್ನು ಮೀಟ್ ಮಾಡೋದು ಸರ್ವೇಸಾಮಾನ್ಯವಾಗಿರುತ್ತೆ …ಇನ್ನು ತಮ್ಮ ಸ್ವಂತಕ್ಕೆ ಏನಾದರೂ ಕಾರ್ ಬೈಕ್ ಗಳನ್ನು ತೆಗೆದುಕೊಂಡರೆ ಅದನ್ನ ತನ್ನ ನೆಚ್ಚಿನ ಸ್ಟಾರ್ ರ ಬಳಿ ತೆಗೆದುಕೊಂಡು ಹೋಗಿ ಆಟೋಗ್ರಾಫ್ ಹಾಕಿಸುವುದು, ಅಥವಾ ಅವರ ಅವರಿಗೆ ಕೀ ಕೊಟ್ಟು ಗಾಡಿಯನ್ನ ರೈಡ್ ಮಾಡಿಸೋದು ಎಲ್ಲವೂ ಇತ್ತೀಚಿನ ದಿನಗಳಲ್ಲಿ ಕಾಮನ್ ಆಗಿದೆ….

ಕನ್ನಡ ಸಿನಿಮಾ ರಂಗದ ಬಾದ್ ಷಾ ಕಿಚ್ಚ ಸುದೀಪ್ ಅಭಿಮಾನಿ ಸಂಘದ ಕಾರ್ಯಧ್ಯಕ್ಷರಾಗಿರುವ ಜಗದೀಶ್ ಅವರು ಹೊಸ ಕಾರ್ ಖರೀದಿ ಮಾಡಿದ್ದಾರೆ… ಆ ಕಾರನ್ನ ಮೊದಲಿಗೆ ಕಿಚ್ಚ ಸುದೀಪ್ ಅವರನ್ನು ಭೇಟಿ ಮಾಡಿ ಕಾರನ್ನು ತೋರಿಸಿ ಅವರೊಂದಿಗೆ ಒಂದು ರೈಡ್ ಕೂಡ ಹೋಗಿ ಬಂದಿದ್ದಾರೆ… ಸುದೀಪ್ ಕೂಡ ತಮ್ಮ ಹುಡುಗರ ಬೆಳವಣಿಗೆ ಕಂಡು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ… ಸದ್ಯ ಕಿಚ್ಚ ಸುದೀಪ್ ಕೆ ಸಿ ಸಿ ಕ್ರಿಕೆಟ್ ಪ್ರಾಕ್ಟೀಸ್ ನಲ್ಲಿ ಸಕ್ಕತ್ ಬ್ಯುಸಿಯಾಗಿದ್ದಾರೆ.. ಇನ್ನು ಕಿಚ್ಚ ಸುದೀಪ್ ಅವ್ರ ಹೊಸ ಸಿನಿಮಾ ಪ್ರೀಪ್ರೊಡಕ್ಷನ್ ಕೆಲಸಗಳು ನಡೆಯುತ್ತಿದ್ದು ಆದಷ್ಟು ಬೇಗ ಸಿನಿಮಾ ಅನೌನ್ಸ್ ಮಾಡುವುದಾಗಿ ತಿಳಿಸಿದ್ದಾರೆ…