ಪ್ರತಿ ವಾರಾತ್ಯದಲ್ಲಿ ಪ್ರೇಕ್ಷಕರು ಮಿಸ್ ಮಾಡದೇ ನೋಡುತ್ತಾ ಬರುತ್ತಿದ್ದ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಮತ್ತೆ ಶುರುವಾಗ್ತಿದೆ…ಈಗಾಗಲೇ ನಾಲ್ಕು ಸೀಸನ್ ಮೂಲಕ ಪ್ರೇಕ್ಷಕರನ್ನ ರಂಜಿಸಿರೋ ಜೀವಾಹಿನಿ ಈಗ ವೀಕೆಂಡ್ ವಿತ್ ರಮೇಶ್ ಸೀಸನ್ ಐದನ್ನ ಆರಂಭ ಮಾಡ್ತಿದೆ…

ಶೀಘ್ರದಲ್ಲೇ ಕಾರ್ಯಕ್ರಮ ಶುರುವಾಗಲಿದ್ದು ಅದರ ಪ್ರೋಮೋವನ್ನ ಬಿಡುಗಡೆ ಮಾಡಿದೆ ಜೀ ವಾಹಿನಿ… ಸಿನಿಮಾ ಕ್ರಷೇತ್ರ ಮಾತ್ರವಲ್ಲದೇ ಬೇರೆ ಕ್ಷೇತ್ರದಲ್ಲಿಯೂ ಸಾಧನೆ ಮಾಡಿರೋ ಗಣ್ಯರನ್ನ ಕರೆಸಿ ಅವರ ಸಾಧನೆಯನ್ನು ಜಗತ್ತಿಗೆ ಪರಿಚಯಿಸೋ ಕಾರ್ಯಕ್ರಮ ಇದಾಗಿದ್ದು ,ಮಾರ್ಚ್ ಮೊದಲ ವಾರದಲ್ಲಿ ಕಾರ್ಯಕ್ರಮ ಪ್ರಸಾರ ಆಗುವ ಸಾಧ್ಯತೆ ಇದೆ…
ಸೀಸನ್ ಐದರ ಮೊದಲ ಅತಿಥಿ ರಮ್ಯಾ ಅಥವಾ ರಿಷಬ್ ಶೆಟ್ಟಿ ಆಗಮಿಸಬಹುದು ಎಂದು ಹೇಳಲಾಗುತ್ತಿದೆ…ಅದಷ್ಟೇ ಅಲ್ಲದೇ ಡಾಲಿ ಧನಂಜಯ್ ಕೂಡ ಈ ಭಾರಿಯ ವೀಕೆಂಡ್ ವಿತ್ ರಮೇಶ್ ಸೀಸನ್ ಗೆ ಎಂಟ್ರಿಕೊಡ್ತಾರಂತೆ…ಸದ್ಯ ಪ್ರೋಮೋದಿಂದ ಸದ್ದು ಮಾಡ್ತಿರೋ ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಶೀಘ್ರದಲ್ಲಿಯೇ ಶುರುವಾಗೋದು ಕನ್ಫರ್ಮ್