ಜಗತ್ತಿನಾದ್ಯಂತ ಹೆಸರು ಮಾಡಿರುವಂತಹ ಕನ್ನಡದ ಸಿನಿಮಾ ಕಾಂತಾರ ನೂರು ದಿನ ಪೂರೈಸಿದೆ… ಕಡಿಮೆ ಬಜೆಟ್ನಲ್ಲಿ ಅತಿ ಹೆಚ್ಚು ಗಳಿಗೆ ಮಾಡಿದ ಸಿನಿಮಾ ಎಂಬ ಹೆಗ್ಗಳಿಕೆಗೆ ಕಾಂತಾರ ಸಿನಿಮಾ ಸೇರ್ಪಡೆಗೊಂಡಿದೆ… ರಿಷಬ್ ಶೆಟ್ಟಿ ನಿರ್ದೇಶನ ಮಾಡಿ ನಟಿಸಿದಂತಹ ಕಾಂತರಾ ಸಿನಿಮಾವನ್ನ ಹೊಂಬಾಳೆ ಸಂಸ್ಥೆ ಹೆಮ್ಮೆಯಿಂದ ನಿರ್ಮಾಣ ಮಾಡಿತ್ತು….ಕನ್ನಡದಲ್ಲಿ ಮೊದಲಿಗೆ ಬಿಡುಗಡೆಯಾಗಿ ನಂತರ ಅನ್ಯ ಭಾಷೆಗಳಲ್ಲಿಯೂ ಕೂಡ ಡಬ್ ಆಗಿ ಪ್ರಖ್ಯಾತಿಗಳಿಸಿತು ಕಾಂತಾರ ಸಿನಿಮಾ…

ಸದ್ಯ ಸಿನಿಮಾತಂಡ ಕಾಂತಾರ ಸಿನಿಮಾದ ಮೂರನೇ ದಿನದ ಸಂಭ್ರಮವನ್ನು ಕಲಾವಿದರೊಟ್ಟಿಗೆ ಆಚರಣೆ ಮಾಡಿದೆ…. ಇದೇ ಸಂದರ್ಭದಲ್ಲಿ ಸಿನಿಮಾದಲ್ಲಿ ಅಭಿನಯಿಸಿದ ಪ್ರತಿ ಕಲಾವಿದರನ್ನು ಕರೆದು ಗೌರವಿಸಿದೆ… ಅದರ ಜೊತೆಗೆ ಕಲಾವಿದರಿಗೆ ಪಂಜುರ್ಲಿ ಮೂರ್ತಿಯನ್ನು ನೀಡುವ ಮೂಲಕ ಕಾಂತಾರ ಸಿನಿಮಾ ಹಾಗೂ ಪಂಜುರ್ಲಿ ದೈವಕ್ಕೆ ಗೌರವ ಸಲ್ಲಿಸಿದ್ದಾರೆ… ಒಟ್ಟಾರೆ ರಿಷಬ್ ಶೆಟ್ಟಿ ಕಾಂತಾರ ಸಿನಿಮಾ ಮೂಲಕ ಡಿವೈಸ್ ಸ್ಟಾರ್ ಆಗಿ ಹೊರಹೊಮ್ಮಿದ್ದು ಮುಂದಿನ ದಿನಗಳಲ್ಲಿ ಯಾವ ರೀತಿಯ ಸಿನಿಮಾ ಮಾಡುತ್ತಾರೆ ಎಂಬುವ ಕುತೂಹಲ ಪ್ರೇಕ್ಷಕರಲ್ಲಿ ಮೂಡಿದೆ…
