ಬಿಗ್ ಬಾಸ್ ಖ್ಯಾತಿಯ ನಟಿ ಸಾನಿಯಾ ಇತ್ತೀಚಿಗಷ್ಟೇ ಕಂಬಳ ಕಾರ್ಯಕ್ರಮಕ್ಕೆ ಅತಿಥಿಯಾಗಿ ಭಾಗಿಯಾಗಿದ್ದರು… ಇದೇ ಸಮಯದಲ್ಲಿ ಸಾನಿಯಾ ಕಾರ್ಯಕ್ರಮದಲ್ಲಿ ಕಿರಿಕ್ ಮಾಡಿಕೊಂಡಿದ್ದಾರೆ ಎಂದು ಸುದ್ದಿಯಾಗಿತ್ತು.. ಆದರೆ ಇದೇ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ ಸಾನಿಯಾ ನಡೆದ ವಿವಾದ ಹಾಗೂ ಗಲಾಟೆಗೆ ಸ್ಪಷ್ಟೀಕರಣ ಕೊಟ್ಟಿದ್ದಾರೆ…
ಕಂಬಳ ಕಾರ್ಯಕ್ರಮ ಸಂಜೆಯ ವೇಳೆಗೆ ಮುಗಿದು ಹೋಗಿತ್ತು. ನಂತರ ಕಂಬಳ ಕಾರ್ಯಕ್ರಮ ಕಂಬಳ ನೋಡಲೆಂದು ನಾನು ನನ್ನ ಸ್ನೇಹಿತರ ಜೊತೆಗೆ ಹೋಗಿದ್ದೆ …ಕಂಬಳ ಕಾರ್ಯಕ್ರಮ ನೋಡಿ ವಾಪಸ್ ಹೋಟೆಲಿಗೆ ಬರುವಾಗ …ನಶೆಯಲ್ಲಿದ್ದ ಹುಡುಗನೊಬ್ಬನು ನನ್ನ ಸ್ನೇಹಿತೆಯರ ಮೇಲೆ ಬಿದ್ದು ಕಿರುಕುಳ ನೀಡಲು ಮುಂದಾದ…. ಅದೇ ಸಮಯದಲ್ಲಿ ನಾನು ಜೋರಾಗಿ ಕಿರುಚಾಡಿದೆ… ನಂತರ ಕಂಬಳ ಆಯೋಜಕರ ಜೊತೆ ಈ ವಿಚಾರವಾಗಿ ಜೋರಾಗಿ ಮಾತನಾಡಿದೆ…
ಆ ಸಂದರ್ಭದಲ್ಲಿ ನನಗೆ ಹೆಣ್ಣು ಮಕ್ಕಳ ಮೇಲೆ ಆದ ಕಿರುಕುಳವನ್ನು ವಿರೋಧಿಸಬೇಕು ಎಂದು ಎನಿಸಿತು… ಹಾಗಾಗಿ ಅಲ್ಲಿ ಕಿರುಚಾಡಿದೆ ಅದನ್ನ ಬಿಟ್ಟು ಬೇರೆ ರೀತಿಯಲ್ಲಿ ವಿವಾದ ಸೃಷ್ಟಿಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ…. ಹಾಗಾಗಿ ಸುದ್ದಿಗೋಷ್ಠಿ ನಡೆಸಿ ಎಲ್ಲ ವಿಚಾರಕ್ಕೂ ವಿವರಣೆ ನೀಡುತ್ತಿದ್ದೇನೆ….
ಒಬ್ಬಳು ಹೆಣ್ಣು ಮಗಳಾಗಿ ನಾನು ಈ ರೀತಿಯ ವಿಚಾರವನ್ನು ವಿರೋಧಿಸುವುದು ಗುಣವನ್ನು ಬೆಳೆಸಿಕೊಂಡು ಬಂದಿದ್ದೇನೆ… ಆದರೆ ಸದ್ಯ ವಿಡಿಯೋ ವೈರಲ್ ಆಗುತ್ತಿರುವ ಕಾರಣದಿಂದ… ಬಿಗ್ ಬಾಸ್ ನಿಂದ ಬಂದಿರುವ ಪ್ರಖ್ಯಾತಿಯಿಂದ ಸಾನಿಯಾ ಈ ರೀತಿ ನಡೆದುಕೊಳ್ಳುತ್ತಿದ್ದಾರೆ ಎನ್ನುತ್ತಿದ್ದಾರೆ… ಅದಷ್ಟು ಅಲ್ಲದೆ ನಾನು ಸೆಲ್ಫಿ ಕೇಳಿದವರಿಗೆ ಕಪಾಳಕ್ಕೆ ಹೊಡೆದಿದ್ದೇನೆ ಎಂದು ಕೂಡ ಸುದ್ದಿಯಾಗಿದೆ…. ಆದರೆ ಅದೆಲ್ಲ ಸುಳ್ಳು. ಒಬ್ಬ ಪಾನ ಪಾನಮತ್ತ ಹುಡುಗ ನನ್ನ ಇಬ್ಬರು ಸ್ನೇಹಿತೆಯರ ಮೇಲೆ ಬಿದ್ದು ಕಿರುಕುಳ ನೀಡಿದ ಹಾಗಾಗಿ ನಾನು ಅದನ್ನ ವಿರೋಧಿಸಿದೆ…ಯಾರೋ ರಸ್ತೆಯಲ್ಲಿ ಹೋಗುವಾಗ ಎದೆ ಮುಟ್ಟಿ ಓಡಿ ಹೋಗುತ್ತಾರೆ…ಹಿಂದೆಯಿಂದ ಬಂದು ಬ್ಯಾಕ್ ಮುಟ್ಟುತ್ತಾರೆ ಅದೆಲ್ಲವನ್ನೂ ನಾವು ಯಾರಿಗೆ ಹೇಳಿಕೊಳ್ಳಬೇಕು ಹೇಳಿ ಎಂದು ವಿವಾದದ ಬಗ್ಗೆ ಸ್ಪಷ್ಟಿಕರಣ ಕೊಟ್ಟಿದ್ದಾರೆ ನಟಿ ಸಾನಿಯಾ ಅಯ್ಯರ್