ಈ ಹಿಂದೆ ಸ್ಟೂಡೆಂಟ್ಸ್ ಮತ್ತು ಬಿಂದಾಸ್ ಗೂಗ್ಲಿ ಸಿನಿಮಾಗಳನ್ನ ಮಾಡಿ ಸೈ ಎನಿಸಿಕೊಂಡು ಸ್ಯಾಂಡಲ್ ವುಡ್ ನಲ್ಲಿ ಮಿಂಚು ಹರಸಿದ್ದ ನಿರ್ದೇಶಕ ಆರ್.ಎಸ್. ಸಂತೋಷ್ ಇದೀಗ ಕ್ಯಾಂಪಸ್ ಕ್ರಾಂತಿ ಸಿನಿಮಾ ಮೂಲಕ ಮತ್ತೆ ಮೋಡಿ ಮಾಡಲು ರೆಡಿಯಾಗಿದ್ದಾರೆ..

ನಿರ್ದೇಶಕ ಸಂತೋಷ್ ಕುಮಾರ್ ನಿರ್ದೇಶನದ ಮೂರನೇ ಚಿತ್ರವು ಹೊಸಬರನ್ನು ಒಳಗೊಂಡಿದೆ – ಆರ್ಯ,ಆರತಿ ಮತ್ತು ಅಲಂಕಾರ್,ಇಶಾನ ಅಭಿನಯ ಮಾಡಿದ್ದಾರೆ…ಇನ್ನು ಚಿತ್ರದಲ್ಲಿ ಹನುಮಂತೇ ಗೌಡ, ಕೀರ್ತಿರಾಜ್, ವಾಣಿಶ್ರೀ, ಭವಾನಿ ಪ್ರಕಾಶ್ ಆಕ್ಟ್ ಮಾಡಿದ್ದಾರೆ…

ವಿ ಮನೋಹರ್ ಚಿತ್ರಕ್ಕೆ ಸಂಗೀತ ನಿರ್ದೇಶನ ಮಾಡಿದ್ದು ಪಿ ಕೆ ಎಚ್ ದಾಸ್ : ಸಿನಿಮಾಟೋಗ್ರಾಫಿ ಮಾಡಿದ್ದಾರೆ…“ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ರಾಜ್ಯೋತ್ಸವವನ್ನು ಆಚರಿಸುವುದನ್ನು ನಿಲ್ಲಿಸಿದ ಘಟನೆಗೆ ಸಂಬಂಧಿಸಿದ ಕಥೆ ಇದಾಗಿದ್ದು.ಗಾಗಿ ಸಿನಿಮಾಕ್ಕೆ
ಫೆಬ್ರವರಿ ಕೊನೆಯ ವಾರ ಸಿನಿಮಾ ರಿಲೀಸ್ ಮಾಡಲು ರೆಡಿ ಆಗಿದೆ ಚಿತ್ರತಂಡ…