ಸಾಕಷ್ಟು ದಿನಗಳಿಂದ ಕಿಚ್ಚ ಸುದೀಪ್ ನೇತೃತ್ವದಲ್ಲಿ ನಡೆಸಿಕೊಂಡು ಬರ್ತಾ ಇರೋ ಕನ್ನಡ ಚಲಚನಚಿತ್ರ ಕಪ್ (KCC) ಕ್ರಿಕೆಟ್ ಟೂರ್ನ್ಮೆಂಟ್ ಮೂರನೇ ಸೀಸನ್ ಗೆ ಸಿದ್ದತೆಗಳು ನಡೆಯುತ್ತಿದೆ …ಕಿಚ್ಚ ಸುದೀಪ್ ತಂಡವನ್ನ ಕಟ್ಟಿಕೊಂಡು ಈಗಾಗಲೇ ತಯಾರಿಯನ್ನೂ ಮಾಡಿಕೊಂಡಿದ್ದಾರೆ….ಇದೇ ವಿಚಾರವಾಗಿ ಇಂದು ಸುದ್ದಿಗೋಷ್ಠಿ ನಡೆಸಿದ್ದು ಈ ಬಾರಿ ಕ್ರಿಕೆಟ್ ಟೂರ್ನ್ಮೆಂಟ್ ಮೈಸೂರಿನಲ್ಲಿ ನಡೆಯಲಿದ್ಯಂತೆ….
ಈ ಬಾರಿಯ ಪಂದ್ಯವಳಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಹಾಗೂ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇರ್ತಾರಾ ಅನ್ನೋ ಪ್ರಶ್ನೆ ಕಿಚ್ಚನಿಗೆ ಎದುರಾಗಿದೆ…ಅದಕ್ಕೆ ಉತ್ತರಿಸಿದ ಕಿಚ್ಚ ಟೂರ್ನಿಯಲ್ಲಿ ಆಡೋಕೆ ಇಷ್ಟ ಇಲ್ಲದವರು ಬರಲ್ಲ. ಅವರು ಯಾಕೆ ಬಂದಿಲ್ಲ, ಇವರು ಯಾಕೆ ಬಂದಿಲ್ಲ ಅಂತ ಕೇಳಬೇಡಿ. ಚಿತ್ರರಂಗ ನನ್ನ ಸ್ವತ್ತಲ್ಲ. ಎಲ್ಲರಿಗೂ ಆಹ್ವಾನ ನೀಡುತ್ತಿದ್ದೇವೆ ಎಂದು ಸ್ಪಷ್ಟ ಪಡಿಸಿದರು…ಈ ವರ್ಷವೂ ಅಂತಾರಾಷ್ಟ್ರೀಯಮಟ್ಟದ ಕ್ರಿಕೆಟಿಗರು ಭಾಗವಹಿಸಲಿದ್ದಾರೆ. ನಮ್ಮ ಸಿನಿಮಾ ರಂಗದವರು ಸೇರಿದಂತೆ ಬೇರೆ ಚಿತ್ರರಂಗದವರೂ ಇದರಲ್ಲಿ ಭಾಗಿಯಾಗಬಹುದು. ರಾಜಕೀಯ ಮತ್ತು ಮಾಧ್ಯಮದವರು ಕೂಡ ಕೆಸಿಸಿಯಲ್ಲಿ ಆಡಬಹುದು ಎಂದು ಸುದೀಪ್ ತಿಳಿಸಿದರು.