ಕನ್ನಡ ಸಿನಿಮಾರಂಗದ ಉದಯೋನ್ಮುಕ ನಟ ಮುತ್ತುರಾಜ್ (ಧನುಶ್ ) ನಿಧನರಾಗಿದ್ದಾರೆ….ಸ್ಯಾಂಡಲ್ ವುಡ್ ನಲ್ಲಿ ಧನುಷ್ ಎಂದೇ ಗುರುತಿಸಿಕೊಂಡಿದ್ದ ಯುವನಟ ” ಪ್ಯಾರ್ ಕಾ ಗೋಲ್ಗುಂಬಜ” , “ಕೊಟ್ಲಲ್ಲಪ್ಪೋ ಕೈ ” , “ಸಂಪಿಗೆ ಹಳ್ಳಿ” ,ಶಿವಣ್ಣ ಅವರ ” ಲೀಡರ್ ” ಚಿತ್ರ ” ಸ್ನೇಹಿತ” ಚಿತ್ರ ಹಾಗೂ ಇನ್ನು ಹಲವಾರು ಚಿತ್ರಗಳಲ್ಲಿ ನಟಿಸಿದ್ದ ಇವರು ಕಳೆದವಾರ ಲಡಾಖ್ ಗೆ ಶೂಟಿಂಗ್ ಗಾಗಿ ಪ್ರಯಾಣ ಬೆಳೆಸಿದ್ದರು…

ಅಲ್ಲಿಯ ಕ್ಲೈಮೇಟ್ ಸರಿ ಹೊಂದದೆ ಅನಾರೋಗ್ಯದ ಕಾರಣ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು…ಚಿಕಿತ್ಸೆ ಫಲಕಾರಿಯಾಗದೆ ದಿ/ 18/01/2023 ರಂದು ರಾತ್ರಿ 10:45 ಕ್ಕೆ ನಿಧನರಾಗಿದ್ದಾರೆ…ಧನುಷ್ ಮೂಲತಃ ಬಾಗಲಕೋಟೆ ಜಿಲ್ಲೆಯ ಕೋಡಿಹಾಳ ಗ್ರಾಮದವರು ಹಾಗಾಗಿ ಅವ್ರ ಅಂತ್ಯಕ್ರಿಯೆ ಅಲ್ಲೇ ನೆರವೇರಲಿದೆ….