ಸ್ಯಾಂಡಲ್ ವುಡ್ ನ ನಟಿ ಶುಭ್ರ ಅಯ್ಯಪ್ಪ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ…ತನ್ನ ಬಹುದಿನದ ಗೆಳೆಯ ವಿಶಾಲ್ ಅವ್ರ ಜೊತೆ ಶುಭ್ರ ಸಪ್ತಪಧಿ ತುಳಿದಿದ್ದಾರೆ…

ಮದುವೆಯ ಫೋಟೋಗಳನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಳ್ಳುವ ಮೂಲಕ ಖುಷಿಯ ವಿಚಾರವನ್ನ ತನ್ನ ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ ಶುಭ್ರ ಅಯ್ಯಪ್ಪ…

ಫೋಟೋ ಜೊತೆಯಲ್ಲಿ ದೊಡ್ಡಮನೆ’ಯಲ್ಲಿ ನಾನು ಮತ್ತು ವಿಶಾಲ್ ನಮ್ಮ ಆತ್ಮೀಯರ ಸಮ್ಮುಖದಲ್ಲಿ ಮದುವೆಯಾದೆವು. ಇದು ಅವರ 150 ವರ್ಷಗಳ ಹಿಂದಿನ ಮನೆಯಾಗಿದೆ. ಈ ಮಾಂತ್ರಿಕ ಸ್ಥಳದಲ್ಲಿ ನಮ್ಮ ಸುಂದರ ಹತ್ತಿರದ ಮತ್ತು ಆತ್ಮೀಯರೊಂದಿಗೆ ಈ ಸಂತೋಷದಾಯಕ ಸಂದರ್ಭದ ಪ್ರೀತಿಯನ್ನು ನಾವು ಅನುಭವಿಸಿದ್ದೇವೆ ಎಂದು ಬರೆದುಕೊಂಡಿದ್ದಾರೆ…ಈ ಮೂಲಕ ಶುಭ್ರ 150 ವರ್ಷ ಇತಿಹಾಸ ಹೊಂದಿರೋ ಮನೆಗೆ ಸೊಸೆಯಾಗಿ ಕಾಲಿಟ್ಟಿದ್ದಾರೆ…
