ಪೆಂಟಗನ್ ಮೂಲಕ ಐದು ವಿಭಿನ್ನ ಕಥೆಯನ್ನ ಪ್ರೇಕ್ಷಕರ ಮುಂದೆ ತರಲು ನಿರ್ದೇಶಕ ಹಾಗೂ ನಿರ್ಮಾಪಕ ಗುರು ದೇಶಪಾಂಡೆ ವಿಭಿನ್ನ ಪ್ರಯತ್ನಕ್ಕೆ ಮುಂದಾಗಿದ್ದಾರೆ…ಈಗಾಗಲೇ ನಾಲ್ಕು ಕಥೇಯ ಟೀಸರ್ ಬಿಡುಗಡೆ ಆಗಿದ್ದು ಸದ್ಯ ಐದನೇ ಕಥೆಯ ಟೀಸರ್ ಬಿಡುಗಡೆ ಮಾಡಲು ಸಿದ್ದತೆ ಮಾಡಿಕೊಂಡಿದ್ದಾರೆ…

ಪೆಂಟಗನ್ ನ ಐದನೇ ಭಾಗದ ಕಥೆಗೆ ನಿರ್ದೇಶಕ ಕಮ್ ನಿರ್ಮಾಪಕ ಗುರು ದೇಶಪಾಂಡೆ ಅವ್ರೇ ಆಕ್ಷನ್ ಕಟ್ ಹೇಳಿದ್ದಾರೆ …ಸದ್ಯ ರಿಲೀಸ್ ಆಗಿರೋ ಪೋಸ್ಟರ್ ನೋಡ್ತಿದ್ರೆ ಸಿನಿಮಾ ಮೇಲಿನ ನಿರೀಕ್ಷೆ ಮತ್ತಷ್ಟು ಹೆಚ್ಚಾಗುತ್ತಿದೆ…ಈಗಾಗಲೇ ರಿಲೀಸ್ ಆಗಿರೋ ಟೀಸರ್ ಗಳು ಭಾರಿ ಕ್ಯೂರಿಯಾಸಿಟಿ ಮೂಡಿಸಿದ್ದು, ಈ ಪಾರ್ಟ್ ನಲ್ಲಿ ನಟ ಕಿಶೋರ್ ಲುಕ್ ಇಂಟ್ರೆಸ್ಟಿಂಗ್ ಆಗಿದೆ…ಕಿಶೋರ್ ಜೊತೆಯಲ್ಲಿ ನಟ ಪೃಥ್ವಿ ಅಂಬರ್ ಕೂಡ ಚಿತ್ರದಲ್ಲಿ ನಟಿಸಿದ್ದಾರೆ…ಇನ್ನು ಉಳಿದಂತೆ ನಾಲ್ಕು ಭಾಗಗಳ ಕಥೆಯನ್ನ ಆಕಾಶ್ ಶ್ರೀವತ್ಸ, ರಾಘು ಶಿವಮೊಗ್ಗ, ಕಿರಣ್ ಕುಮಾರ್ , ಚಂದ್ರ ಮೋಹನ್ ನಿರ್ದೇಶಿಸಿದ್ದಾರೆ…