ಕಳೆದ ಒಂದು ತಿಂಗಳಿಂದಲೂ ನಟ ವಸಿಷ್ಠ ಸಿಂಹ ಹಾಗೂ ಹರಿಪ್ರಿಯಾ ಮದ್ವೆಯದ್ದೇ ಸುದ್ದಿ …ವಸಿಷ್ಠ ಹಾಗೂ ಹರಿಪ್ರಿಯಾ ಲವ್ ಮಾಡ್ತಿದ್ದಾರೆ ಅಂತ ಜೋರು ಸುದ್ದಿ ಆಗುತ್ತಿದ್ದಂತೆ ಇಬ್ಬರು ಅಧಿಕೃತವಾಗಿ ನಿಶ್ಚಿತಾರ್ಥ ಮಾಡಿಕೊಂಡ್ರು…ಅದಾದ ನಂತ್ರ ಮದುವೆ ದಿನಾಂಕ ಅನೌನ್ಸ್ ಮಾಡಿ ಮದ್ವೆ ಕಾರ್ಡ್ ಕೂಡ ಕೊಡಲು ಶುರು ಮಾಡಿದ್ದಾರೆ…ಈ ಮಧ್ಯೆ ವಸಿಷ್ಠ ಸಿಂಹ ಮತ್ತೊಂದು ಗುಡ್ ನ್ಯೂಸ್ ಕೊಟ್ಟಿದ್ದಾರೆ ಆದ್ರೆ ಇದು ಪರ್ಸನಲ್ ಅಲ್ಲ ಪ್ರೊಫೆಷನಲ್….

ವಸಿಷ್ಠ , ಹರಿಪ್ರಿಯಾ ಜೊತೆ ಸಪ್ತಪದಿ ತುಳಿಯಲು ಇನ್ನು ಕೆಲವೇ ದಿನಗಳು ಭಾಕಿ ಇದೆ…ಅದರ ಬೆನ್ನಲ್ಲೇ ವಸಿಷ್ಠ ಕಾಲಿವುಡ್ ಅಂಗಳಕ್ಕೆ ಕಾಲಿಟ್ಟಿದ್ದಾರೆ…ಪ್ರಭುದೇವಾ ಅಭಿನಯದ ಸಂದೇಶ್ ನಾಗರಾಜ್ ನಿರ್ಮಾಣದ ಚಿತ್ರದ ಮೂಲಕ ತಮಿಳು ಇಂಡಸ್ಟ್ರಿಗೆ ವಸಿಷ್ಠ ಪಾದಾರ್ಪಣೆ ಮಾಡುತ್ತಿದ್ದಾರೆ…
ಚಿತ್ರದ ಟೈಟಲ್ ರಿವಿಲ್ ಮಾಡಿದ್ದು ಐದು ಭಾಷೆಯಲ್ಲಿ ಸಿನಿಮಾ ನಿರ್ಮಾಣ ಆಗ್ತಿದೆ…ವೂಲ್ಫ್ ಎಂದು ಚಿತ್ರಕ್ಕೆ ಹೆಸರಿಟ್ಟಿದ್ದು ಇದೊಂದು ಹಾರಾರ್ ಆಕ್ಷನ್ ಚಿತ್ರವಾಗಿದೆ…ವಿನೋದ್ ವೆಂಕಟೇಶ್ ಚಿತ್ರವನ್ನ ನಿರ್ದೇಶನ ಮಾಡಿದ್ದಾರೆ…ಟೈಟಲ್ ರಿವಿಲ್ ಆಗಿದ್ದು ಚಿತ್ರ ಶೀಘ್ರದಲ್ಲೇ ತೆರೆಗೆ ಬರಲಿದೆ…ಈ ಚಿತ್ರದಲ್ಲಿ ವಸಿಷ್ಠ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ…