ರಾಕಿಂಗ್ ಸ್ಟಾರ್ ಯಶ್ ಜನವರಿ 8ಕ್ಕೆ ತಮ್ಮ ಹುಟ್ಟುಹಬ್ಬವನ್ನ ಆಚರಣೆ ಮಾಡಿಕೊಳ್ತಿದ್ದಾರೆ…ಹೊಸ ಸಿನಿಮಾ ಫೈನಲ್ ಆಗಿಲ್ಲ ಅನ್ನೋ ಕಾರಣಕ್ಕೆ ಯಶ್ ಅಭಿಮಾನಿಗಳನ್ನ ಮೀಟ್ ಮಾಡದೇ ಹೊದದೇಶಕ್ಕೆ ಫ್ಯಾಮಿಲಿ ಜೊತೆ ಪ್ರವಾಸಕ್ಕೆ ಹೋಗಿದ್ದಾರೆ…ಆದ್ರೆ ಬರ್ತಡೇ ದಿನ ಯಶ್ ಅಭಿಮಾನಿಗಳ ಜೊತೆ ಇಲ್ಲದೇ ಇದ್ದರೂ ಫ್ಯಾನ್ಸ್ ಬರ್ತಡೇ ಸೆಲಬ್ರೇಷನ್ ಮಾಡೋದನ್ನ ಮಾತ್ರ ನಿಲ್ಲಿಸಿಲ್ಲ…

ಯಶ್ ಫ್ಯಾಮಿಲಿ ಜೊತೆ ಬರ್ತಡೇ ಸೆಲಬ್ರೇಷನ್ ಮಾಡ್ತಿದ್ರೆ ಇತ್ತ ಸಂತೋಷ್ ಥಿಯೇಟರ್ ಎದುರು ಅಭಿಮಾನಿಗಳು ಮಿಸ್ಟರ್ ಅಂಡ್ ಮಿಸೆಸ್ಸ್ ರಾಮಾಚಾರಿ ಸಿನಿಮಾ ರೀ ರಿಲೀಸ್ ಮಾಡಿ ಸಂಭ್ರಮಿಸಲು ರೆಡಿಯಾಗಿದ್ದಾರೆ…ಥಿಯೇಟರ್ ಮುಂದೆ ಕಟೌಟ್ , ಹಾರ, ತಮಟೆ ಎಲ್ಲವನ್ನೂ ಯಶ್ ಫ್ಯಾನ್ಸ್ ರೆಡಿ ಮಾಡ್ಕೊಂಡಿದ್ದಾರೆ…

ಎಂಟು ವರ್ಷದ ಹಿಂದೆ ಸೂಪರ್ ಹಿಟ್ ಆಗಿದ್ದ ಸಿನಿಮಾವನ್ನ ಮತ್ತೆ ರಿಲೀಸ್ ಮಾಡುವ ಮೂಲಕ ಯಶ್ ಅವ್ರ ಈ ವರ್ಷದ ಹುಟ್ಟುಹಬ್ಬವನ್ನ ಸೆಲಬ್ರೇಟ್ ಮಾಡ್ತಿದ್ದಾರೆ ರಾಕಿಭಾಯ್ ಫ್ಯಾನ್ಸ್…