ಹಿರಿಯ ನಟಿ ಬಿ ಸರೋಜದೇವಿ ಅವರ ಹುಟ್ಟುಹಬ್ಬದಂದು ನಟಿ ಸುಧಾರಾಣಿ ಭಾಗಿ ಆಗಿದ್ದು ಇದೇ ಸಂದರ್ಭದಲ್ಲಿ ಮೇರು ನಟಿ ಹರಿಣಿ ಅವ್ರನ್ನ ಭೇಟಿ ಮಾಡಿದ್ದಾರೆ…ಈ ಬಗ್ಗೆ ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಸುಧಾರಾಣಿ ಬರೆದುಕೊಂಡಿದ್ದಾರೆ…
ಅಭಿನಯ ಸರಸ್ವತಿ ಮತ್ತೊಬ್ಬರು ಕನ್ನಡದ ಶ್ರೇಷ್ಠ ನಟಿ.. ಬಿ.ಸರೋಜಾದೇವಿ ಅಮ್ಮನವರು ಮತ್ತು ಮೇರು ನಟಿ ಹರಿಣಿ ಅವರು.. ಇಂದು ಕನ್ನಡ ಚಿತ್ರರಂಗದ ಮೊದಲ ಲೇಡಿ ಸೂಪರ್ ಸ್ಟಾರ್ ಸರೋಜಾದೇವಿ ಅಮ್ಮನವರ ಹುಟ್ಟುಹಬ್ಬದ ಸಂಭ್ರಮದಲ್ಲಿ ಇವರಿಬ್ಬರನ್ನು ಜೊತೆಯಾಗಿ ಭೇಟಿ ಮಾಡಿದ ಅದ್ವಿತೀಯ ಅಪರೂಪದ ಕ್ಷಣವಿದು. ಇಂದು ಇಬ್ಬರು ಶ್ರೇಷ್ಠ ಕಲಾವಿದೆಯರ ಜೊತೆ ಸಮಯ ಕಳೆದು, ಸಾಕಷ್ಟು ಮಾತನಾಡುವ ಅವಕಾಶ ಸಿಕ್ಕಿದ್ದು ನನ್ನ ಅದೃಷ್ಟ..
ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು ಸರೋಜಾದೇವಿ ಅಮ್ಮ.. ನಿಮ್ಮ ಸಾಧನೆ ನಮಗೆ ಮಾರ್ಗದರ್ಶನ.. ಸದಾ ಕಾಲ ಹೀಗೆ ಸಂತೋಷವಾಗಿ, ಆರೋಗ್ಯವಾಗಿ, ನಗುನಗುತ್ತಾ ಇರಿ.. ನಿಮ್ಮ ಆಶೀರ್ವಾದ ಹಾರೈಕೆ ಕನ್ನಡ ಚಿತ್ರರಂಗದ ಮೇಲೆ ಯಾವಾಗಲೂ ಹೀಗೆ ಇರಲಿ..