ಅಭಿಮಾನಿಗಳೇ ಸೇರಿ ಪ್ರಚಾರ ಮಾಡುತ್ತಿರೋ ಕ್ರಾಂತಿ ಸಿನಿಮಾ ತೆರೆಗೆ ಬರಲು ಸಿದ್ದವಾಗಿದೆ…ಇದೇ ತಿಂಗಳ 26ರಂದು ಸಿನಿಮಾ ದೇಶದಾಧ್ಯಂತ ತೆರೆ ಕಾಣಲಿದ್ದು ಸಿನಿಮಾದ ಟ್ರೇಲರ್ ಇಂದು ಲಾಂಚ್ ಆಗ್ತಿದೆ…ಸಾಮಾನ್ಯವಾಗಿ ಟ್ರೇಲರ್ ಲಾಂಚ್ ಅಂದ್ರೆ ಮ್ಯೂಸಿಕ್ ಕಂಪನಿಯ ಯೂಟ್ಯೂಬ್ ನಲ್ಲಿ ಬಿಡುಗಡೆ ಆಗೋದು ಕಾಮನ್ ಆದ್ರೆ ಕ್ರಾಂತಿ ಸಿನಿಮಾ ಟ್ರೇಲರ್ ಥಿಯೇಟರ್ ಗಳಲ್ಲಿ ಲಾಂಚ್ ಆಗ್ತಿರೋದು ವಿಶೇಷ …

ರಾಜ್ಯಧ್ಯಾಂತ 100 ಕ್ಕೂ ಹೆಚ್ಚು ಥಿಯೇಟರ್ ನಲ್ಲಿ ಟ್ರೇಲರ್ ಲಾಂಚ್ ಆಗ್ತಿದೆ…ರಾಜ್ಯದ ವಿತರಣೆ ವಿಭಾಗಗಳಾದ ಬೆಂಗಳೂರು-ಕೋಲಾರ-ತುಮಕೂರು, ಮಂಡ್ಯ-ಮೈಸೂರು-ಚಾಮರಾಜನಗರ-ಹಾಸನ, ಬೆಳಗಾವಿ-ಬಿಜಾಪುರ-ದಾವಣೆಗೆರೆ-ಚಿತ್ರದುರ್ಗ-ಹೊಸಪೇಟೆ-ಬಳ್ಳಾರಿ, ಹುಬ್ಬಳ್ಳಿ-ಗದಗ-ಧಾರವಾಡ, ಬಾಂಬೆ ಕರ್ನಾಟಕ, ಮಂಗಳೂರು-ಸೌಥ್ ಕೆನರಾ-ಶಿವಮೊಗ್ಗ-ಚಿಕ್ಕಮಗಳೂರು ಹಾಗೂ ಹೈದರಾಬಾದ್ ಕರ್ನಾಟಕದ ಆಯ್ದ ಚಿತ್ರಮಂದಿರಗಳಲ್ಲಿ ಕ್ರಾಂತಿ ಸಿನಿಮಾದ ಟ್ರೈಲರ್ ಇಂದು ಸಂಜೆ 7:30 ಕ್ಕೆ ಬಿಡುಗಡೆ ಆಗಲಿದೆ

ಕ್ರಾಂತಿ ಸಿನಿಮಾವನ್ನ ವಿ ಹರಿಕೃಷ್ಣ ನಿರ್ದೇಶನ ಮಾಡಿದ್ದು ಶೈಲಜಾ ನಾಗ್ ನಿರ್ಮಾಣ ಮಾಡ್ತಿದ್ದಾರೆ…ಚಿತ್ರದಲ್ಲಿ ದರ್ಶನ್ ಜೊತೆಯಲ್ಲಿ ರಚಿತಾ, ನಿಮಿಕಾ ರತ್ನಾಕರ್ ಇನ್ನು ಅನೇಕರು ಅಭಿನಯ ಮಾಡಿದ್ದಾರೆ…ಈಗಾಗಲೇ ಸಿನಿಮಾದ ಟೀಸರ್ ಮತ್ತು ಹಾಡುಗಳು ಸಖತ್ ಸೌಂಡ್ ಮಾಡಿದ್ದು ಸಿನಿಮಾ ಮೇಲೆ ನಿರೀಕ್ಷೆ ಹೆಚ್ಚಾಗಿದೆ…