ಕನ್ನಡ ನಾಡಿನ ದಂತಕಥೆ “ಕಾಂತಾರ” ಸಿನಿಮಾವು ದೇಶದೆಲ್ಲೆಡೆ ಹೊಸ ಇತಿಹಾಸವನ್ನು ಸೃಷ್ಟಿಸಿದೆ. ಸಿನಿಮಾ ರಿಲೀಸ್ ಆದ ದಿನದಿಂದ ಇಲ್ಲಿಯವರೆಗೆ ‘ಕಾಂತಾರ’ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. ರಿಷಬ್ ಶೆಟ್ಟಿ ಅಭಿನಯದ ಈ ಚಿತ್ರಕ್ಕೆ ಸಿಕ್ಕ ಮೆಚ್ಚುಗೆ ಅಷ್ಟಿಷ್ಟಲ್ಲ. ಇತ್ತೀಚೆಗಷ್ಟೇ OTT ಯಲ್ಲಿ ಪ್ರಸಾರವಾಗಿದ್ದ ‘ಕಾಂತಾರ’ ಇದೀಗ ಕಿರುತೆರೆಗೆ ಲಗ್ಗೆ ಇಡಲು ಸಜ್ಜಾಗಿದೆ .

ತುಳುನಾಡಿನ ದೈವಾರಾಧನೆಯ ಬಗ್ಗೆ ಇಡೀ ವಿಶ್ವಕ್ಕೆ ತೋರಿಸಿಕೊಟ್ಟ ಸೂಪರ್ ಹಿಟ್ ಸಿನಿಮಾ “ಕಾಂತಾರ” ಇದೀಗ ಕಿರುತೆರೆಯಲ್ಲಿ ಪ್ರಸಾರವಾಗಲು ಸಜ್ಜಾಗಿದೆ. ಕನ್ನಡದ ಜನಪ್ರಿಯ ವಾಹಿನಿ ‘ಸ್ಟಾರ್ ಸುವರ್ಣ’ದಲ್ಲಿ ಈಗಾಗಲೇ ‘ಕಾಂತಾರ’ ಟೀಸರ್ ಪ್ರಸಾರವಾಗುತ್ತಿದ್ದು, ನೋಡುಗರು ಉತ್ಸುಕದಿಂದ ಕಾಯುತ್ತಿದ್ದಾರೆ.
ಬರ್ತಿದೆ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಮೂವಿ “ಕಾಂತಾರ” ಅತೀ ಶೀಘ್ರದಲ್ಲಿ ನಿಮ್ಮ ನೆಚ್ಚಿನ ‘ಸ್ಟಾರ್ ಸುವರ್ಣ’ ವಾಹಿನಿಯಲ್ಲಿ ಪ್ರಸಾರವಾಗಲಿದೆ.