ನಟಿ ಪವಿತ್ರ ಲೋಕೇಶ್ ಹಾಗೂ ತೆಲುಗು ನಟ ನರೇಶ್ ಜೊತೆಗೆ ಸಂಬಂಧವಿದೆ ಅನ್ನೋ ಸುದ್ದಿ ಎಲ್ಲೆಡೆ ಹರಿದಾಡಿತ್ತು..ಅದಕ್ಕೆ ಪುಷ್ಠಿ ಎನ್ನುವಂತೆ ಪವಿತ್ರ ಹಾಗೂ ನರೇಶ್ ಮೈಸೂರಿನ ಒಂದೇ ಹೋಟೆಲ್ ನಲ್ಲಿ ವಾಸವಾಗಿದ್ರು…ಆನಂತ್ರ ಮಾಧ್ಯಮದ ಮುಂದೆ ಪವಿತ್ರ ಲೋಕೇಶ್ ನರೇಶ್ ನನ್ನ ಒಳ್ಳೆ ಸ್ನೇಹಿತ ಅನ್ನೋ ಮಾತನ್ನೂ ಕೂಡ ಹೇಳಿಕೊಂಡಿದ್ದರು…ಸುಚೇಂದ್ರ ಪ್ರಸಾದ್ ಜೊತೆ ವಿವಾಹವೇ ಆಗಿಲ್ಲ ಅನ್ನೋ ಶಾಕಿಂಗ್ ಹೇಳಿಕೆಯನ್ನೂ ಕೊಟ್ಟಿದ್ದರು…

ಸದ್ಯ ಹೊಸ ವರ್ಷಕ್ಕೆ ಮತ್ತೊಂದು ಶಾಕಿಂಗ್ ವಿಡಿಯೋ ರಿಲೀಸ್ ಮಾಡಿದ್ದಾರೆ ನಟಿ ಪವಿತ್ರ ಲೋಕೇಶ್ ಹಾಗೂ ನರೇಶ್…ಯೆಸ್ ಹೊಸ ವರ್ಷಕ್ಕೆ ಮದುವೆ ಆಗುವ ನಿರ್ಧಾರ ಮಾಡಿದ್ದಾರಂತೆ ಪವಿತ್ರ ಲೋಕೇಶ್ ಹಾಗೂ ನರೇಶ್…ಈ ಬಗ್ಗೆ ವಿಡಿಯೋ ಒಂದನ್ನ ತಮ್ಮ ಟ್ವಿಟ್ಟರ್ ಅಕೌಂಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ ನಟ ನರೇಶ್ …
ಇನ್ನು ವಿಶೇಷ ಅಂದ್ರೆ ಈ ವಿಡಿಯೋದಲ್ಲಿ ಕೇಕ್ ಕಟ್ ಮಾಡಿ ಇಬ್ಬರು ಪರಸ್ಪರ ತಿನ್ನಿಸಿ ನಂತ್ರ ಇಬ್ಬರು ಲಿಪ್ ಲಾಕ್ ಮಾಡಿದ್ದಾರೆ…ಈ ವಿಡಿಯೋ ಕ್ಯಾಮೆರಾದಲ್ಲಿ ಸೆರೆಯಾಗಿದೆ…ವಿಡಿಯೋ ನೋಡಿದ ಅಭಿಮಾನಿಗಳು ಕೆಲವ್ರು ಶಾಕ್ ಆಗಿದ್ರೆ ಇನ್ನು ಕೆಲವ್ರು ಸಿಹಿ ಸುದ್ದಿ ಕೊಟ್ರಿ ಅಂತ ವಿಷ್ ಮಾಡಿದ್ದಾರೆ…..