ನಮ್ಮನ್ನ ಗುರುತಿಸೋಕೆ ತಮ್ಮ ತಂದೆ ತಾಯಿ ನಮಗೆ ಇಡೋ ಹೆಸರು, ಮುಂದೊಂದು ದಿನ ಹೆಸರುವಾಸಿಯಾಗುತ್ತೆ. ಅದು ಪ್ರಸಿದ್ದಿಗೆ ಬರುತ್ತೆ, ಅಂತ ಯಾರಿಗು ಗೊತ್ತಿರುವುದಿಲ್ಲ. ಆದ್ರೆ ಆ ಹೆಸರು ಚಾಲ್ತಿಗೆ ಬಂದಾಗ ನಾವು ಅದನ್ನ ನಮ್ಮ ಮಕ್ಕಳಿಗೆ ಇಡೋಕೆ ನೋಡ್ತಿವಿ. ಯಾಕಂದ್ರೆ ಅವರಂತೆ ನಮ್ಮ ಮಕ್ಕಳು ಪೇಮಸ್ ಆಗಲಿ ಅಂತ, ಅವರ ಹೆಸರನ್ನ ಇಡ್ತಾರೆ ಆದ್ರೆ ಆ ಹೆಸರುಗಳನ್ನ ಇಡೋವಾಗ, ಜಾತಕವಾಗಲಿ ಅಥವಾ ನ್ಯೂಮರಾಲಜಿಯಾಗಲಿ ನೋಡೋದಿಲ್ಲ. ಈಗ ವಿಷಯಕ್ಕೆ ಬರೋಣ ನಮ್ಮ ಹೆಸರಿನಲ್ಲಿ ಈಗ ಆ ಅಕ್ಷರ ಇದ್ದೀಯಾ ಅಂತ ಚೆಕ್ ಮಾಡೋಣ. ಆ ಅಕ್ಷರ ನಮ್ಮ ಹೆಸರಿನಲ್ಲಿ ಇದ್ದರೆ ಆ ಮಗು ಲಕ್ ಬರುತ್ತ ಅಂತ ಹುಡುಕೋದು ಬೇಡ. ಆದ್ರೆ ಆ ಅಕ್ಷರ ಇದ್ದವರು ಈಗ ಏನಾಗಿದ್ದಾರೆ ಅಂತ ಒಂದು ಸರಿ ಚೆಕ್ ಮಾಡೋಣ ಬನ್ನಿ. ಡಾ.ರಾಜ್ ಕುಮಾರ್ ಈ ಹೆಸರನ್ನ ಕೇಳದ ಕನ್ನಡಿಗನಿಲ್ಲ.
ಕರ್ನಾಟಕ ರತ್ನ, ನಟನೆಗೆ ಕೆಂಟಕಿ ಕರ್ನಲ್ ಪ್ರಶಸ್ತಿ ಪಡೆದ ಏಕೈಕ ನಟ ನಮ್ಮ ಅಣ್ಣಾವ್ರು. ಇವರ ಮೊದಲಿನ ಹೆಸರು ಮುತ್ತುರಾಜ್. ಗಮನಿಸಿ ಡಾ.ರಾಜ್ ಕುಮಾರ್ ಹೆಸರಿನಲ್ಲೂ “ರ”ಕಾರವಿದೆ. ಮುತ್ತುರಾಜ್ ಹೆಸರಿನಲ್ಲು “ರ”ಕಾರವಿದೆ. ಹಾಗೆ ಇತ್ತ ತಮಿಳಿನಲ್ಲಿ ನೋಡಿದರೆ ಸೂಪರ್ ಸ್ಟಾರ್ ರಜನೀಕಾಂತ್ ಇಡೀ ವಿಶ್ವವೇ ಕಾಯುವ ಸಿನಿಮಾ ಕೊಡೋ ಸೂಪರ್ ಸ್ಟಾರ್. ಇಂದಿಗೂ ಅದೇ ಮಾಸ್ ಇಮೇಜ್ ಉಳಿಸಿಕೊಂಡಿರೋ, ಇವರ ಮೂಲ ಹೆಸರು ಶಿವಾಜಿ ರಾವ್ ಗಾಯಕ್ವಾಡ್. ಈ ಹೆಸರಲ್ಲು “ರ”ಕಾರವಿದೆ. ಚಿರಂಜೀವಿ,ವಿಷ್ಣುವರ್ಧನ್(ಸಂಪತ್ ಕುಮಾರ್),ಅಂಬರೀಷ್(ಅಮರನಾಥ್),ಶ್ರೀಮುರುಳಿ, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ದರ್ಶನ್, ವಿಜಯ್ ರಾಘವೇಂದ್ರ, ರಮೇಶ್ ಅರವಿಂದ್, ರಕ್ಷಿತ್ ಶೆಟ್ಟಿ, ರಿಷಭ್ ಶೆಟ್ಟಿ ಇನ್ನು ರಾಜಕೀಯದಲ್ಲಿ ನರೇಂದ್ರ ಮೋದಿ, ಸಿದ್ದರಾಮಯ್ಯ, ಯಡಿಯೂರಪ್ಪ, ರಾಹುಲ್ ಗಾಂಧಿ ಅವರನ್ನು ಹೊರತುಪಡಿಸಿ ಎಲ್ಲಾ ಹೆಸರಲ್ಲು ರ ಕಾರವಿದೆ.
ಹೀರೋಯಿನ್ ಗಳ ಸಾಲಿಗೆ ಬಂದರೆ ಆರತಿ, ಭಾರತಿ, ಸರೋಜದೇವಿ, ಪಂಡರೀಬಾಯಿ ಇನ್ನೂ ಈಗಿನ ಕಾಲದ ಹೀರೋಯಿನ್ಗಳ ವಿಷಯಕ್ಕೆ ಬಂದರೆ ರಕ್ಷಿತಾ, ರಮ್ಯ, ರಚಿತಾರಾಮ್, ರಶ್ಮಿಕಾ ಮಂದಣ್ಣ, ಸಮಂತ ರುತುಪ್ರಭು, ಕಾಜೋಲ್ ಅಗ್ರವಾಲ್, ರಾಗಿಣಿ ಇವರನ್ನ ಹೊರತು ಪಡಿಸಿ ವಿಶ್ವನಾಯಕರು ಮತ್ತು ವಿಶ್ವದಲ್ಲಿ ಹೆಸರುಮಾಡಿದ ದೊಡ್ಡ ದೊಡ್ಡ ಧೀಮಂತರ ಹೆಸರು ನೋಡಿದರು ಅವರ ಹೆಸರಲ್ಲು ಈ “ರ”ಕಾರ ಹಾಸು ಹೊಕ್ಕಾಗಿದೆ. ಸಾಂಡ್ರ ಬುಲಕ್, ಜಾಮಿ ಕರ್ಟಿಸ್, ರೀಸ್ ವಿತರ್ಸ್ಪೂನ್, ಸ್ಕರ್ಲೆಟ್ ಜಾನ್ಸನ್, ಜೆನಿಫರ್ ಲಾರೆನ್ಸ್ ಹೀಗೆ ಜಗತ್ತಿನ ಪ್ರಸಿದ್ದ ವ್ಯಕ್ತಿಗಳ ನೇಮ್ ಫೇಮ್ ಹಿಂದೆ “ರ”ಕಾರದ ಮಹತ್ವ ತುಂಬಾ ಇದೆ.
ಈಗ ಸಿನಿಮಾಗಳ ಹೆಸರಿಗೆ ಬರೋದಾದ್ರೆ ಹಿಟ್ ಸಿನಿಮಾಗಳ ಲೀಸ್ಟ್ ತೆಗೆಯೋಣ ಪ್ರೇಮಲೋಕ, ಬಂಗಾರದ ಮನುಷ್ಯ, ಕಾಂತಾರ, ಕವಿರತ್ನ ಕಾಳಿದಾಸ, ಒಲವಿನ ಉಡುಗೊರೆ, ರಾಜಕುಮಾರ, ರಂಗೀತರಂಗ, ರಾಜಾಹುಲಿ, ಸಿಂಹಾದ್ರಿಯ ಸಿಂಹ, ನಾಗರಹಾವು, ಮೇಯರ್ ಮುತ್ತಣ್ಣ ಹೀಗೆ “ರ” ಕಾರದ ಸಿನಿಮಾಗಳು ಕೂಡ ಹಿಟ್ ಲೀಸ್ಟ್ ಸೇರಿದೆ. ಹಿರೋಗಳಿಗೆ ದೊಡ್ಡ ಬ್ರೇಕ್ ಕೊಟ್ಟಿದ್ದು ಈಗ ಇತಿಹಾಸ ಹಾಗಂತ ನಾವು “ರ”ಕಾರದ ಹೆಸರಿಟ್ಟುಕೊಂಡರೆ ಮಾತ್ರ ಫೇಮಸ್ ಆಗುತ್ತೀವಿ ಅನ್ನೋದು ಸುಳ್ಳೋ ಸತ್ಯವೋ ಗೊತ್ತಿಲ್ಲ. ಆದ್ರೆ ಅದರ ಜೊತೆಗೆ ನಮ್ಮ ಶ್ರಮವು ಇರಬೇಕು ಅನ್ನೋದು ಮಾತ್ರ ಸತ್ಯ.