ಅಭಿಮಾನ ಅಂದ್ರೆ ಹಾಗೆ ..ತನ್ನ ನೆಚ್ಚಿನ ನಟ ಸ್ಟೈಲ್ ಕಾಪಿ ಮಾಡೋದು , ಅವ್ರಂತೆ ಹೇರ್ ಸ್ಟೈಲ್ ಮಾಡಿಸಿಕೊಳ್ಳೊದು , ಅವ್ರಂತೆ ಡೈಲಾಗ್ ಹೇಳೋದು ಅಭಿಮಾನಿಗಳು ಸದಾ ಫಾಲೋ ಮಾಡೋ ಟ್ರೆಂಡ್ .. ಅದರಂತೆಯೇ ಆಟೋಗ್ರಾಫ್ ಬೇಕು ಅಂತ ಕೇಳಿ ಕೈಮೇಲೆ ಹಾಕಿಸಿಕೊಂಡು ಅದನ್ನೇ ಟ್ಯಾಟೂ ಆಗಿ ಬದಲಾಯಿಸಿಕೊಂಡಿರೋ ಅದೆಷ್ಟೋ ಅಭಿಮಾನಿಗಳಿದ್ದಾರೆ….

ಅದಕ್ಕಾಗಿಯೇ ಸಾಕಷ್ಟು ಸ್ಟಾರ್ ಗಳು ಕೈ ಮೇಲೆ ಸಹಿ ಹಾಕೋದನ್ನೇ ಬಿಟ್ಟಿದ್ದಾರೆ…ಆದ್ರೆ ಈಗಿನ ಅಭಿಮಾನಿಗಳು ಒಂದೆಜ್ಜೆ ಮುಂದು ಹೋಗಿ ಮತ್ತಷ್ಟು ವಿಶೇಷ ಅನ್ನಿಸಿಕೊಳ್ಳೊ ಪ್ರಯತ್ನ ಮಾಡ್ತಾರೆ …ಅದೇ ಸಾಲಿಗೆ ಸೇರೆ ಅಭಿಮಾನಿ ಅಶ್ವಥ್ …ಅಭಿಷೇಕ್ ಅಂಬರೀಶ್ ಅಭಿಮಾನಿ ಆಗಿರುವ ಅಶ್ವಥ್ ಭಿಷೇಕ್ ಅವ್ರ ಸಂಪೂರ್ಣ ಹಚ್ಚೆಯನ್ನ ತನ್ನ ಬೆನ್ನ ಮೇಲೆ ಹಾಕಿಕೊಂಡಿದ್ದಾರೆ….
ಮೂಲತಃ ಮದ್ದೂರು ತಾಲೂಕು ಕೊಪ್ಪ ಹೋಬಳಿ ಹರಳಕೆರೆ ಗ್ರಾಮದವರಾಗಿರೋ ಅಶ್ವಥ್ ಸಾಕಷ್ಟು ದಿನಗಳಿಂದ ಅಭಿಷೇಕ್ ಅವ್ರ ಅಭಿಮಾನಿಯಾಗಿದ್ದಾರೆ..ಅವ್ರ ಮೇಲಿನ ಪ್ರೀತಿಗೆ ಬೆನ್ನ ಮೇಲೆ ಈ ರೀತಿ ಹಚ್ಚೆ ಹಾಕಿಸಿಕೊಂಡಿದ್ದಾರೆ..ಸದ್ಯ ಈ ಹಚ್ಚೆ ಫೋಟೋ ವಿಡಿಯೋ ಎಲ್ಲೆಡೆ ವೈರಲ್ ಆಗ್ತಿದೆ…