ಅಭಿಷೇಕ್ ಅಂಬರೀಷ್ ಅಭಿನಯದ ಮೂರನೇ ಸಿನಿಮಾದ ಮುಹೂರ್ತ ಇವತ್ತು ಸದ್ದಿಲ್ಲದೇ ನಡೆದಿದೆ. ಆರ್ಆರ್ಆರ್ ಮೋಷನ್ ಪಿಕ್ಚರ್ಸ್ ಬ್ಯಾನರ್ನಡಿಯಲ್ಲಿ ಕಿಟ್ಟಪ್ಪ ನಿರ್ಮಾಣ ಹಾಗೂ ನಿರ್ದೇಶನದಲ್ಲಿ ನಿರ್ಮಾಣವಾಗ್ತಾ ಇರೋ ಸಿನಿಮಾಕ್ಕೆ ಇಂದು ಬೆಂಗಳೂರಿನಲ್ಲಿ ಸರಳ ಮುಹೂರ್ತ ನಡೆದಿದೆ. ಯಂಗ್ ರೆಬೆಲ್ ಸ್ಟಾರ್ ಅಭಿಷೇಕ್ ಈ ವರ್ಷದ ಬ್ಲಾಕ್ ಬಸ್ಟರ್ ಹಿಟ್ ಸಿನಿಮಾ ಕಾಂತಾರದ ಹೀರೋಯಿನ್ ಲೀಲಾ ಖ್ಯಾತಿಯ ಸಪ್ತಮಿಗೌಡ ಜೊತೆ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ..


1990ರ ಆಕ್ಷನ್ ಪ್ರೇಮಕಥೆಯನ್ನು ಹೇಳು ಹೊರಟಿರುವ ಕಾಳಿಯಲ್ಲಿ ಕಾವೇರಿ ವಿವಾದದ ಕಥೆ ಇದೆ. ಅಭಿಷೇಕ್ ಅಭಿನಯದ ಬ್ಯಾಡ್ ಮ್ಯಾನರ್ಸ್ ಸದ್ಯಾ ಪೋಸ್ಟ್ ಪ್ರೊಡಕ್ಷನ್ ನಲ್ಲಿದ್ದು, ಈಗಾಗ್ಲೆ ಅಭಿಷೇಕ್ ಅಭಿನಯದ 4ನೇ ಸಿನಿಮಾ ಕೂಡ ಅನೌನ್ಸ್ ಆಗಿದೆ. ಈಗಾಗ್ಲೆ ಗಜಕೇಸರಿ, ಹೆಬ್ಬುಲಿ, ಪೈಲ್ವಾನ್ ಸಿನಿಮಾಗಳನ್ನು ನಿರ್ದೇಶನ ಮಾಡಿರೋ ಕೃಷ್ಣ ಈಗ ಅಭಿಯ ಜೊತೆ ಕಾಳಿ ಕಥೆಯನ್ನು ಹೇಳೊಕೆ ಹೊರಟಿದ್ದಾರೆ. ಈ ಸಿನಿಮಾಗಾಗಿ ಅಭಿಷೇಕ್ ಲುಕ್ ಬದಲಿಸಿದ್ದು, ಅಭಿ ಜೊತೆಗಿನ ಸಪ್ತಮಿ ಜೋಡಿ ಸಿನಿಪ್ರಿಯರಿಗೆ ಹೊಸದೇ ಫೀಲ್ ನೀಡಲಿದೆ.