ಟೈಟಲ್ ಹಾಗೂ ಫಸ್ಟ್ ಲುಕ್ ರಿಲೀಸ್ ನಿಂದಲೇ ಸದ್ಯಾ ಸ್ಯಾಂಡಲ್ವುಡ್ ನಲ್ಲಿ ಸಿನಿಮಾಗಳು ಸೌಂಡ್ ಮಾಡೋಕೆ ಶುರು ಮಾಡಿವೆ. ಅದ್ರಲ್ಲೂ ಸಿನಿಮಾದ ಕನಸು ಹೊತ್ತು, ಸಿನಿಮಾ ಮಾಡಲು ಬರುವ ಯುವ ಉತ್ಸಾಹಿ ಮನಸ್ಸುಗಳು ತಮ್ಮ ಸಿನಿಮಾ ಬಗ್ಗೆ ಫಸ್ಟ್ ಇಂಪ್ರೆಷನ್ನಲ್ಲಿ ಗಮನ ಸೆಳೀತಾರೆ…! ಅದೇ ಥರಾ ಕ್ಯೂರ್ಯಾಸಿಟಿ ಕ್ರಿಯೇಟ್ ಮಾಡ್ತಿರೋ ಸಿನಿಮಾ ಮತ್ಸ್ಯ ಗಂಧ.. ಸಿನಿಮಾ ಟೈಟಲ್ ಎಷ್ಟು ಸ್ಪೆಷಲ್ಲಾಗಿದ್ಯೋ ಸಿನಿಮಾದ ಫಸ್ಟ್ ಲುಕ್ ಪೋಸ್ಟರ್ ಕೂಡ ವಿಭಿನ್ನವಾಗಿದೆ, ಅಷ್ಟೆ ಸ್ಪೆಷಲ್ಲಾಗಿರೋದು ಫಸ್ಟ್ ಟೈಮ್ ಖಾಕಿ ತೊಟ್ಟು ಖಡಕ್ ಲುಕ್ ನಲ್ಲಿ ಮಿಂಚೋಕೆ ರೆಡಿಯಾಗಿರೋ ನಟ ಪೃಥ್ವಿ ಆಂಬರ್.

ಕಲಿಕಾ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ತಯಾರಾಗ್ತಿರೋ ಮತ್ಸ್ಯ ಗಂಧ ಅನ್ನೋ ಮಾಸ್ ಥ್ರಿಲ್ಲರ್ ಸಿನಿಮಾಕ್ಕೆ ದೇವರಾಜ್ ಪೂಜಾರಿ ಡೈರೆಕ್ಷನ್ ಇದೆ. ದೇವರಾಜ್ ಪೂಜಾರಿ ನಿರ್ದೇಶನ ಎರಡನೇ ಚಿತ್ರ ಈ ಮತ್ಸ್ಯ ಗಂಧ. ದೇವರಾಜ್ ಈ ಹಿಂದೆ ಕಿನಾರೆ ಅನ್ನೋ ಸಿನಿಮಾ ಮಾಡಿ ಎಲ್ಲರ ಪ್ರಶಂಸೆ ಪಡೆದಿದ್ರು. ಪ್ರಶಾಂತ್ ಸಿದ್ದಿ ಸಂಗೀತ ಸೇರಿದಂತೆ ಎಲ್ಲಾ ಪ್ರತಿಭಾವಂತರ ತಂಡ ಕೂಡಿ ಕಮರ್ಷಿಯಲ್ ಕಂಟೆಂಟ್ ಪ್ರಯೋಗಕ್ಕೆ ಮುಂದಾಗಿದೆ. ಮತ್ಸ್ಯಗಂಧ ಅಂತ ಟೈಟಲ್ ಇಟ್ಕೊಂಡ ಮೇಲೆ ಇದು ಕರಾವಳಿಯ ಸಿನಿಮಾನೇ ಇರಬೇಕು ಅಂತ ಎಲ್ಲರು ಆಲೋಚಿಸ್ತಾರೆ, ಅದು ನಿಜ ಅನ್ನುತ್ತೆ ಸಿನಿಮಾಕ್ಕೆ ಇಟ್ಟಿರೋ ಟ್ಯಾಗ್ ಲೈನ್. ಚಿತ್ರಕ್ಕೆ ಸ್ಟೋರಿ ಆಫ್ ಉತ್ತರ ಕನ್ನಡ ಅನ್ನೋ ಟ್ಯಾಗ್ ಲೈನ್ ಇಟ್ಟುಕೊಂಡಿದ್ದಾರೆ. ಪೋಸ್ಟರ್ನಿಂದಲೇ ಕ್ಯೂರ್ಯಾಸಿಟಿ ಕ್ರಿಯೇಟ್ ಸಿನಿಮಾ ಬಗ್ಗೆ ನಿರೀಕ್ಷೆಗಳು ಸಾಕಷ್ಟಿದೆ.