21.8 C
Bengaluru
Wednesday, November 30, 2022
spot_img

Exclusive: ಡಾಲಿ ಹೊಸ ಸಿನಿಮಾದ ನಾಯಕಿ ಮೋಹಕತಾರೆ ರಮ್ಯಾ

ನಟಿ ರಮ್ಯಾ ಇಂಡಸ್ಟ್ರಿಗೆ ವಾಪಸ್ ಬಂದ್ರು ಓಕೆ…ಸಿನಿಮಾ ಪ್ರೊಡ್ಯೂಸರ್ ಕೂಡ ಆದ್ರು, ಅದು ಓಕೆ…ಫ್ರೆಂಡ್ಸ್‌ ಸಜೆಷನೋ ..ಅಥವಾ ಅವ್ರಿಗೆ ಇಷ್ಟ ಆಯ್ತೋ.. ಏನೋ ಶೆಟ್ಟಿ ಗ್ಯಾಂಗ್ ಜೊತೆ ಸಿನಿಮಾ ಮಾಡೋದು ಕನ್ಫರ್ಮ್ ಆಯ್ತು…ಅನೌನ್ಸ್‌ ಕೂಡ ಆಯ್ತು…ಇನ್ನೇನು ರಾಜ್ ಬಿ ಶೆಟ್ಟಿ ಜೊತೆ ಹಳೇ ಪ್ರೇಮ ಕಥೆ ಹೇಳ್ತಾರೆ ಅನ್ನೋ ಹೊತ್ತಿಗೆ ಅದ್ಯಾಕೋ ರಮ್ಯಾ ಮನಸ್ಸು ಬದಲಾಯಿಸಿ ಬಿಟ್ರು…
ಅಷ್ಟಕ್ಕೂ ರಮ್ಯಾ ತಮ್ಮದೇ ಹೋಂ ಬ್ಯಾನರ್ ನಲ್ಲಿ ಆಕ್ಟ್ ಮಾಡದೇ ಹೊರ ಬಂದಿದ್ದು ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ರಾಜಕೀಯ ಅಂತಿದ್ದಾರೆ ಫ್ಯಾನ್ಸ್ ಅಂಡ್ ಫಾಲೋವರ್ಸ್…ಆದ್ರೆ ಅದು ಸುಳ್ಳು ..ರಮ್ಯಾ ತಮ್ಮದೇ ಬ್ಯಾನರ್‌ ನಲ್ಲಿ ಆಕ್ಟ್‌ ಮಾಡದೇ ಹೊರಬಂದಿದ್ದಕ್ಕೆ ಕಾರಣ ಬೇರೇನೆ ಇದೆ…ಯೆಸ್‌ …ಅದಕ್ಕೆ ಕಾರಣ ಕಮರ್ಷಿಯಲ್‌ ಸಿನಿಮಾ ಅಂತಿದೆ ಮೂಲಗಳು…

https://youtu.be/mkEM3v7DcPs


ರಾಜ್‌ ಬಿ ಶೆಟ್ಟಿ ಸದ್ಯ ಹೇಳಲು ಹೊರಟಿರೋ ಕಥೆ ಬ್ಯೂಟಿಫುಲ್‌ ಲವ್‌ ಸ್ಟೋರಿ ಅಂತ ಸುದ್ದಿ ಇದೆ…ಆದ್ರೆ ರಮ್ಯಾ ಔಟ್‌ ಅಂಡ್‌ ಔಟ್‌ ಕಮರ್ಷಿಯಲ್‌ ಹೀರೋಯಿನ್‌ ..ಅದೇ ರೀತಿ ಬಿಗ್‌ ಸ್ಕ್ರೀನ್‌ ಗೆ ಎಂಟ್ರಿಕೊಡಿ ಅನ್ನೋದನ್ನ ಕೆಲವ್ರು ಸಜೆಸ್ಟ್‌ ಮಾಡಿದ್ದಾರಂತೆ…ಇಂದಿಗೂ ಫ್ಯಾನ್ಸ್‌ ಅವ್ರನ್ನ ಕಮರ್ಷಿಯಲ್‌ ನಟಿಯಾಗಿ ನೋಡೋದಕ್ಕೆ ಆಸೆ ಪಡ್ತಿದ್ದಾರೆ…ಹಾಗಾಗಿ ರಮ್ಯಾ ಆ ಸಿನಿಮಾದಲ್ಲಿ ಆಕ್ಟ್‌ ಮಾಡೋ ನಿರ್ಧಾರ ಬದಲಾಯಸಿದ್ದಾರಂತೆ….


ಹಾಗಾದ್ರೆ ಯಾವ ಸಿನಿಮಾದಲ್ಲಿ ರಮ್ಯಾ ಆಕ್ಟ್‌ ಮಾಡ್ತಾರೆ…ಯಾವ ಹೀರೋ ಜೊತೆ ಆಕ್ಟ್‌ ಮಾಡ್ತಾರೆ ಅನ್ನೋ ಪ್ರಶ್ನೆಗೆ ಉತ್ತರ ಡಾಲಿ ಧನಂಜಯ್…ಯೆಸ್‌ ರಮ್ಯಾ, ಡಾಲಿ ಆಕ್ಟ್‌ ಮಾಡೋ ಮುಂದಿನ ಚಿತ್ರಕ್ಕೆ ನಾಯಕಿಯಾಗ್ತಿದ್ದಾರೆ ಅನ್ನೋ ಸುದ್ದಿ ಮಾರ್ಕೆಟ್‌ ನಲ್ಲಿ ಜೋರಾಗಿದೆ…ಡಾಲಿ ಅಭಿನಯದ ರೋಹಿತ್‌ ಪದಕಿ ನಿರ್ದೇಶನದ ಉತ್ತರಕಾಂಡ ಚಿತ್ರಕ್ಕೆ ರಮ್ಯಾ ಅವ್ರೇ ನಾಯಕಿ ಅಂತೆ.. ಇನ್ನು ವಿಶೇಷ ಅಂದ್ರೆ ಈ ಚಿತ್ರದಲ್ಲಿ ಹ್ಯಾಟ್ರಿಕ್‌ ಹೋರೋ ಶಿವರಾಜ್‌ ಕುಮಾರ್‌ ಸ್ಪೆಷಲ್‌ ಅಪೀರಿಯೆನ್ಸ್‌ ನಲ್ಲಿ ಕಾಣಿಸಿಕೊಳ್ತಿದ್ದಾರಂತೆ ..ಈ ಸಿನಿಮಾವನ್ನ ಕೆ ಆರ್‌ ಜಿ ಅಂದ್ರೆ ಕಾರ್ತಿಕ್‌ ಗೌಡ ಮತ್ತು ಯೋಗಿ ಜಿ ರಾಜ್‌ ನಿರ್ಮಾಣ ಮಾಡ್ತಿದ್ದಾರೆ..ಕೆಆರ್ಜಿ ಬಳಿ ಈಗಾಗಲೇ ಡಾಲಿ ಕಾಲ್‌ ಶೀಟ್‌ ಇದ್ದು, ಸಿನಿಮಾ ಕೂಡ ಅನೌನ್ಸ್‌ ಆಗಿದೆ…ಡಾಲಿ ಬರ್ತಡೇಗೆ ಪೋಸ್ಟರ್‌ ಕೂಡ ರಿವಿಲ್‌ ಆಗಿದೆ…ಇನ್ನು ಎಲ್ಲರಿಗೂ ಗೊತ್ತಿರುವಂತೆ ರಮ್ಯಾ ಕೆಆರ್‌ ಜಿ ಸ್ಟುಡಿಯೋಸ್‌ ಜೊತೆ ಉತ್ತಮ ಬಾಂದವ್ಯ ಹೊಂದಿದ್ದಾರೆ ಹಾಗಾಗಿ ಈ ಸಿನಿಮಾ ಫಿಕ್ಸ್‌ ಅಂತಿದ್ದಾರೆ ಫ್ಯಾನ್ಸ್..ಅದೇನೆ ಇರಲಿ ರಮ್ಯಾ ಸ್ಕ್ರೀನ್‌ ಮೇಲೆ ಬಂದು ಆಕ್ಟ್‌ ಮಾಡಿ ಡ್ಯಾನ್ಸ್‌ ಮಾಡಿದ್ರೆ ಸಾಕು ಅನ್ನೋದೆ ಅವ್ರ ಅಭಿಮಾನಿಗಳ ಆಸೆ….

ಪವಿತ್ರ, ಬಿ

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles