21.8 C
Bengaluru
Wednesday, November 30, 2022
spot_img

Interesting Interview : ಅಗ್ನಿ ಶ್ರೀಧರ್‌-ಹೆಡ್‌ ಬುಷ್-ಡಾಲಿ-ರವಿಚಂದ್ರನ್‌-ಸುದೀಪ್‌!

ಡಾಲಿ ಧನಂಜಯ್‌ ಅಭಿನಯದ ಬಹುನಿರೀಕ್ಷಿತ ಹೆಡ್‌ ಬುಷ್, ಕನ್ನಡದ ಖ್ಯಾತ ಬರಹಗಾರ, ಪತ್ರಕರ್ತ ಅಗ್ನಿ ಶ್ರೀಧರ್‌ ಅವ್ರ MY DAYS IN UNDERWORLD ಅನ್ನೋ ಪುಸ್ತಕ ಆಧಾರಿತ ಸಿನಿಮಾ. ಕನ್ನಡದಲ್ಲಿ ಅಗ್ನಿ ಶ್ರೀಧರ್‌ ನಿರ್ದೇಶನದ, ಚಿತ್ರಕಥೆ ಇರುವ, ಸಂಭಾಷಣೆ ಇರುವ ಸಾಕಷ್ಟು ಸಿನಿಮಾಗಳು ಬಂದಿವೆ, ಹಿಟ್‌ ಕೂಡ ಆಗಿವೆ, ಈಗ ರಿಲೀಸ್‌ ಆಗ್ತಾ ಇರೋ ಹೆಡ್‌ ಬುಷ್‌ ಕೂಡ ಅವ್ರದ್ದೇ ಸಿನಿಮಾ ನಿರ್ದೇಶನದ ಜವಾಬ್ದಾರಿ ಮಾತ್ರ ಶೂನ್ಯ ಅವ್ರದ್ದು. ಕನ್ನಡ ಪಿಚ್ಚರ್‌ ಜೊತೆ ಮಾತನಾಡಿರೋ ಆಗ್ನಿ ಶ್ರೀಧರ್‌ ಸಾಕಷ್ಟು ಇಂಟರೆಸ್ಟಿಂಗ್‌ ವಿಷಯಗಳನ್ನು ಶೇರ್‌ ಮಾಡಿದ್ದಾರೆ.

ಕರುನಾಡ ಚಕ್ರವರ್ತಿ ಶಿವರಾಜ್‌ಕುಮಾರ್‌ ಡಾನ್‌ ಜಯರಾಜ್‌ ಪಾತ್ರ ಮಾಡಬೇಕಿತ್ತಂತೆ

ಡಾಲಿ ಧನಂಜಯ್‌ ಹೆಡ್‌ ಬುಷ್‌ ಸಿನಿಮಾದಲ್ಲಿ ಡಾನ್‌ ಜಯರಾಜ್‌ ಪಾತ್ರದಲ್ಲಿ ನಟಿಸಿದ್ದಾರೆ. ಇದ್ರ ಪ್ರಿಪರೇಷನ್‌ ಬಗ್ಗೆ, ಡಾನ್‌ ಜಯರಾಜ್‌ ಆಗಿ ಡಾಲಿ ಹೇಗ್‌ ನಾಟಿಸಿದ್ದಾರೆ ಅನ್ನೋದ್ರ ಬಗ್ಗೆ ಡಾನ್‌ ಜಯರಾಜ್‌ ಹೇಳಿದ್ದಾರೆ..!

ಡಾನ್‌ ಜಯರಾಜ್‌ ಅಸಲಿಯಾಗಿ ಹೇಗಿದ್ರು, ಅವ್ರನ್ನ ಕೊಂದವರು ಯಾರು? ಜಯರಾಜ್‌ ಬಗ್ಗೆ ಇರೋ ಊಹಾಪೋಹಗಳು ಗಾಸಿಪ್‌ ಬಗ್ಗೆ ಅಗ್ನಿ ಶ್ರೀಧರ್‌ ಮಾತನಾಡಿದ್ದಾರೆ.

ರವಿಚಂದ್ರನ್‌ ಕನ್ನಡದವರೇ ಅಲ್ಲ ಅಂತ ಆರೋಪ ಮಾಡೋರಿಗೆ ಅಗ್ನಿ ಶ್ರೀಧರ್‌ ಖಡಕ್‌ ಆಗಿ ಉತ್ತರಿಸಿದ್ದಾರೆ, ಸುದೀಪ್‌ ಅವ್ರ5 ಜೊತೆ ಯಾಕೆ ಸಿನಿಮಾ ಮಾಡಿಲ್ಲ ಅನ್ನೋ ಪ್ರಶ್ನೆಗೂ ಅವ್ರ ಬಳಿ ಉತ್ತರವಿದೆ.

ಇನ್ನೂ ಬಸವಣ್ಣನ ಬಗ್ಗೆ ಮಾತನಾಡಿರೋ ಅಗ್ನಿ ಶ್ರೀಧರ್‌, ಬಸವಣ್ಣ ಈಗ ಇದ್ದಿದ್ದರೆ ಈಗಿನ ರಾಜಕಾರಣಿಗಳೆಲ್ಲಾ ಕಣ್ಮರೆಯಾಗ್ತಾ ಇದ್ರು ಅಂತ ವಿಚಾರಾತ್ಮಕವಾಗಿ ವಿವರಣೆ ನೀಡಿದ್ದಾರೆ.

ಫಿಲ್ಮಿ ಅಪ್‌ಡೇಟ್‌, ಕನ್ನಡ ಪಿಚ್ಚರ್‌

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles