ಕನ್ನಡದ ಮೋಸ್ಟ್ ಹ್ಯಾಪನಿಂಗ್ ಹೀರೋಯಿನ್ ಕ್ಯೂಟ್ ಶ್ರೀಲೀಲಾ ಮೊದಲ ಬಾರಿಗೆ ಡಬ್ಬಿಂಗ್ ಮಾಡಿದ್ದಾರೆ.ಡಬ್ಬಿಂಗ್ ಚೊಚ್ಚಲ ಪ್ರಯತ್ನದಲ್ಲೇ ಶಹಬಾಸ್ ಎನ್ನಿಸಿಕೊಂಡಿದ್ದಾರೆ. ಸಾಧುಕೋಕಿಲಾರ ಲೂಪ್ ಸ್ಟುಡಿಯೋದಲ್ಲಿ ಶ್ರೀಲೀಲಾ ಬೈಟು ಲವ್ ಚಿತ್ರದ ಡಬ್ಬಿಂಗ್ ಮಾಡಿ ಮುಗಿಸಿದ್ದು. ಇದೇ ತಿಂಗಳು 25ಕ್ಕೆ ಸಿನಿಮಾ ತೆರೆಗೆ ಬರ್ತಿದೆ.
ಅಂದ್ಹಾಗೆ ಧನ್ವೀರ್, ಶ್ರೀಲೀಲಾ ಮುಖ್ಯಭೂಮಿಕೆಯಲ್ಲಿ, ಹರಿ ಸಂತು ನಿರ್ದೇಶನದಲ್ಲಿ. ಕೆ.ವಿ.ಎನ್ ಪ್ರೋಕ್ಷನ್ಸ್ ನಲ್ಲಿ ನಿರ್ಮಾಣವಾಗಿರೋ ಸಿನಿಮಾ, ಈಗಾಗ್ಲೇ ಹಾಡುಗಳಿಂದ ವಿಶೇಷ ಕುತೂಹಲವನ್ನ ಹುಟ್ಟಿಸಿದೆ. ದಿನಕ್ಕೊಂದು ಸರ್ಪ್ರೈಸ್ ಕೊಡ್ತಿರೋ ಟೀಮ್, ಸಿನಿಮಾದಲ್ಲೂ ಸಾಕಷ್ಟು ಅಚ್ಚರಿಗಳನ್ನ ತುಂಬಿದೆ.
