29.4 C
Bengaluru
Sunday, February 5, 2023
spot_img

ಕೆಜಿಎಫ್‌-2 ಡಬ್ಬಿಂಗ್‌ ಮುಗಿಸಿದ ಶ್ರೀನಿಧಿ ಶೆಟ್ಟಿ

ಮೊನ್ನೆಯಷ್ಟೆ ಕೆಜಿಎಫ್‌ ಸಿನಿಮಾ ಟೀಮ್‌ ಕೊಲ್ಲುರು-ಧರ್ಮಸಥಳ ಅಂತ ತೀರ್ಥಯಾತ್ರೆ ಕೈಗೊಂಡು ಅಧಿಕೃತವಾಗಿ ಕೆಜಿಎಫ್‌-2 ಸಿನಿಮಾ ಪ್ರಮೋಷನ್‌ಗೆ ಚಾಲನೆ ನೀಡಿದ್ದಾರೆ. ಏ.14ಕ್ಕೆ ಕೆಜಿಎಫ್‌ ಸಿನಿಮಾ ರಿಲೀಸ್‌ ಆಗಲು ಎಲ್ಲಾ ತಯಾರಿಗಳು ನಡೀತಾನೇ ಇವೆ. ಪೋಸ್ಟ್‌ ಪ್ರೊಡಕ್ಷನ್‌ ಕೂಡ ಬಿರುಸಿನಿಂದ ಸಾಗ್ತಾ ಇದೆ. ಈ ನಡುವೆ ಸಿನಿಮಾದ ನಾಯಕಿ ರೀನಾ ಪಾತ್ರದಲ್ಲಿ ನಟಿಸಿರೋ ನಟಿ ಶ್ರೀನಿಧಿ ಶೆಟ್ಟಿ ಕೆಜಿಎಫ್‌ ಚಾಪ್ಟರ್‌-2ನ ತಮ್ಮ ಭಾಗದ ಡಬ್ಬಿಂಗ್‌ ಕಂಪ್ಲೀಟ್‌ ಮಾಡಿ ಮುಗಿಡಿದ್ದಾರೆ.

ಕೆಜಿಎಫ್‌ ಚಾಪ್ಟರ್‌-1 ರಲ್ಲಿ ರೀನಾ ಮೊದಲಾರ್ಧದಲ್ಲಿ ಹೆಚ್ಚು ಕಾಣಿಸಿಕೊಂಡು, ದ್ವಿತಿಯಾರ್ಧದಲ್ಲಿ ಆಗೊಮ್ಮೆ ಹೀಗೊಮ್ಮೆ ಬರ್ತಾ ಇದ್ರು, ಆದ್ರೆ ಈಗ ಚಾಪ್ಟರ್‌-2 ನಲ್ಲಿ ರೀನಾ ಪಾತ್ರ ಹೆಚ್ಚಿನ ಪ್ರಾಮುಖ್ಯತೆ ಹೊಂದಿದ್ದು, ಹೆಚ್ಚಿನ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆ ಇದೆ. ಇದಕ್ಕಾಗಿ ಸಿನಿಮಾ ಟೀಮ್‌ನಂತಯೆ ಶ್ರೀನಿಧಿ ಶೆಟ್ಟಿ ಕೂಡ ಕಾತುರದಿಂದ ಕಾದಿದ್ದಾರೆ. ಈ ಪಾತ್ರ ಎರಡನೇ ಭಾಗದಲ್ಲಿ ಹೇಗಿರುತ್ತೆ ಅನ್ನೋ ಕುತೂಹಲದ ಜೊತೆ ಸಿನಿಮಾಕ್ಕಾಗಿ ಕಾಯ್ತಾ ಇರಿ..

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles