ಹಿರಿಯ ಗಾಯಕ ಮನೊ.. ಯಾರ್ಯಾರಿಗೆ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಹಂಸಲೇಖ ಕಾಂಬಿನೇಷನ್ ಹಾಡುಗಳು ಇಷ್ಟವೋ ಅವರಿಗೆಲ್ಲಾ ಮನೊ ಫೆವರಿಟ್ ಸಿಂಗರ್, ಮೂರು ದಶಕಗಳಿಂಧ ಖನ್ನಡದಲ್ಲೂ ಹಾಡ್ತಿರೋ ಮನೋ, ತುಂಬಾ ದಿನಗಳ ಮೇಲೆ ಯೂತ್ಫುಲ್ ಕನ್ನಡ ಸಿನಿಮಾ ಒಂದಕ್ಕೆ ಹಾಡಿದ್ದಾರೆ ಅದುವೆ ಬೈ ಟು ಲವ್ ಸಿನಿಮಾದ ಟೈಟಲ್ ಸಾಂಗ್. ಅಜನೀಶ್ ಲೋಕನಾಥ್ ಮ್ಯೂಸಿಕ್ ಕಂಪೋಸ್ ಮಾಡಿರೋ, ನಿರ್ದೇಶಕ ಹರಿ ಸಂತೋಷ್ ಬರೆದಿರೋ ಲಿರಿಕ್ಸ್ಗೆ ಮನೊ ಧ್ವನಿಯಾಗಿದ್ದಾರೆ.

ಧನ್ವೀರ್ ಹಾಗೂ ಶ್ರೀಲೀಲಾ ಮುದ್ದು ಮುದ್ದಾಗಿ ಕಾಣೋ ಹಾಡು, ಕೇಳೊದಕ್ಕೂ ತಂಪೆನಿಸುತ್ತೆ. ಇಬ್ಬರ ನಡುವಿನ ಲವ್ ಡೆವಲಪಮೆಂಟ್ನ ತುಂಬಾ ಕ್ಯೂಟ್ ಆಗಿ ಕಟ್ಟಿ ಕೊಟ್ಟಿರೋ ನಿರ್ದೇಶಕರು ಈ ಹಾಡಿನಿಂದ ಇನ್ನಷ್ಟು ಅಟ್ರಾಕ್ಟೀವ್ ಮಾಡಿದ್ದಾರೆ.
ಕೆವಿನ್ ಪ್ರೊಡಕ್ಷನ್ಸ್ ಬ್ಯಾನರ್ ನಲ್ಲಿ ನಿರ್ಮಾಣ ಆಗ್ತಾ ಇರೋ ಸಿನಿಮಾದ ಎರಡನೇ ಹಾಡು ಈಗ ರಿಲೀಶ್ ಆಗ್ತಾ ಇದ್ದು, ಎರಡೂ ಹಾಡುಗಳು ಒಂದಕ್ಕಿಂತ ಒಂದ ವಿಭಿನ್ನವಾಗಿದೆ ಈ ಹಿಂದೆ ರಿಲೀಶ್ ಅಗಿದ್ದ ಐ ಹೇಟ್ ಯೂ ಹಾಡು ಕೂಡ ಟ್ರೆಂಡ್ ಆಗಿತ್ತು, ಈಗ ಈ ಹಾಡು ಕೂಡ ಸೌಂಡ್ ಮಾಡಲಿದೆ.