ಬೆಂಕಿ ಸಿನಿಮಾ ಟೀಸರ್ ಇವತ್ತು ರಿಲೀಸ್ ಆಗಿದೆ. ಹೇಗಿದೆ ಗುರು ಟೀಸರ್ ಅಂದ್ರೆ ಒಂದೇ ಮಾತಲ್ಲಿ ಹೇಳಬಹುದು, ಬೆಂಕಿ… ಬೆಂಕಿ… ಗುರು ಅಂತ, ಅನೀಶ್ ಮೊದಲ ಬಾರಿಗೆ ಹಳ್ಳಿ ಬ್ಯಾಕ್ ಡ್ರಾಪ್ನಲ್ಲಿ ಹೇಳೋಕೆ ಹೊರಟಿರೋ ಆಕ್ಷನ್ ರೊಮ್ಯಾಂಟಿಕ್ ಕಥೆ ಬೆಂಕಿ, ಸಿನಿಮಾದಲ್ಲಿ ಪವರ್ ಪ್ಯಾಕ್ಡ್ ಆಕ್ಷನ್, ಆಕ್ಷನ್ನ ಸರಿದೂಗಿಸೋ ಎಮೋಷನ್, ಅದಕ್ಕೆ ಪೂರಕವಾಗಿ ಕಾಮಿಡಿ ಎಲ್ಲವೂ ಹದವಾಗಿ ಮಿಕ್ಸ್ ಆಗಿದೆ. ಅನೀಶ್ ನಿರ್ಮಾಣ ಮಾಡ್ತಿರೋ ಸಿನಿಮಾಕ್ಕೆ ಎ.ಆರ್ ಶಾನ್ ಡೈರೆಕ್ಷನ್ ಇದೆ. ಸಿನಿಮಾದಲ್ಲಿ ಅನೀಶ್ ಈ ಬಾರಿ ತಂಗಿ ಎಮೋಷನ್ನ ತಂದಿರೋ ಹಾಗಿದೆ.
ಅನೀಶ್ಗೆ ನಾಯಕಿಯಾಗಿ ಸಂಪದ ಹುಲಿವಾನ ನಟಿಸಿದ್ದಾರೆ. ಸಂಪದ, ಈ ಹಿಂದೆ ಕಿರುತೆರೆ ಹಾಗೂ ಇತ್ತೀಚೆಗೆ ರಿಲೀಸ್ ಆದ ನಿಖಿಲ್ ಕುಮಾರಸ್ವಾಂಇ ಅವ್ರ ರೈಡರ್ನಲ್ಲಿ ಸೆಕೆಂಡ್ ಹೀರೋಯಿನ್ ಆಗಿ ಕಾಣಿಸಿಕೊಂಡಿದ್ರು. ಇನ್ನು ಅನೀಶ್ ತಂಗಿ ಪಾತ್ರದಲ್ಲಿ ಶೃತಿ ಪಾಟೀಲ್, ಮಜಾ ಭಾರತ ಖ್ಯಾತಿಯ ಕಾರ್ತಿಕ್ ನಟಿಸಿದ್ದಾರೆ. ಸಿನಿಮಾಕ್ಕೆ ಕೌಶಿಕ್ ಹರ್ಷ ಸಂಗೀತ ಸಂಯೋಜನೆ, ವಿಕ್ರಮ್ ಮೋರ್ ಸಾಹಸ ಹಾಗೂ ವೀನಸ್ ನಾಗರಾಜ್ ಮೂರ್ತಿ ಅವ್ರ ಕ್ಯಾಮರಾ ವರ್ಕ್ ಇದೆ.

ತಮ್ಮದೇ ಪ್ರೊಡಕ್ಷನ್ ಹೌಸ್ನಲ್ಲಿ ಸಿನಿಮಾ ಮಾಡೋವರೆಗೂ ಆಕ್ಷನ್ ಹೀರೋ ಆಗಿ ಸಕ್ಸಸ್ ಕಂಡಿರದ ಅನೀಶ್, ತಮ್ಮದೇ ಪ್ರೊಡಕ್ಷನ್ನಲ್ಲಿ ಸಿನಿಮಾ ಮಾಡೋಕೆ ಶುರು ಮಾಡಿದಮೇಲೆ ಕಮರ್ಶಿಯಲ್ಲಿ ಸೂಪರ್ ಸಕ್ಸಸ್ ಕಂಡ್ರು. ಅಕಿರಾದಿಂದ ಶುರುವಾಗಿ, ವಾಸು ನಾನ್ ಪಕ್ಕಾ ಕಮರ್ಶಿಯಲ್, ರಾಮಾರ್ಜುನ ಮತ್ತೀಗ ಬೆಂಕಿ ಎಲ್ಲಾವೂ ಪಕ್ಕಾ ಕಮರ್ಶಿಯಲ್ ಸಿನಿಮಾಗಳೇ, ಸಿನಿಮಾ ನೋಡಿ ಎಂಜಾಯ್ ಮಾಡ್ಬೇಕು ಅನ್ನೋರಿಗೆ ಪೈಸಾ ವಸೂಲ್ ಸಿನಿಮಾಗಳು ಇದೇ ಕಾರಣಕ್ಕೆ ಹಿಟ್ ಆಗ್ತಿವೆ ಅನೀಶ್ ಸಿನಿಮಾಗಳು. ಈಗ ರಿಲೀಸ್ ಆಗಿರೋ ಬೆಂಕಿಯೂ ಅಷ್ಟೆ.