ಮೈಸೂರಿನ ಶಕ್ತಿಧಾಮ ದ ಮಕ್ಕಳು ಇಂದು ಪುನೀತ್ ರಾಜ್ ಕುಮಾರ್ ಸಮಾಧಿ ಸ್ಥಳಕ್ಕೆ ಭೇಟಿ ನೀಡಿದ್ದಾರೆ ..ಅಪ್ಪು ಅಗಲಿದ ನಂತರ ಶಿವರಾಜ್ ಕುಮಾರ್ ಹಾಗೂ ಗೀತಾ ಶಿವರಾಜ್ ಕುಮಾರ್ ತಮ್ಮ ಹೆಚ್ಚಿನ ಸಮಯವನ್ನು ಮೈಸೂರಿನ ಶಕ್ತಿಧಾಮದಲ್ಲಿ ಕಳೆಯುತ್ತಿದ್ದಾರೆ ..
ಇತ್ತೀಚಿಗಷ್ಟೆ ಗಣರಾಜ್ಯೋತ್ಸವದ ದಿನ ಮಕ್ಕಳ ಜತೆ ಗಣರಾಜ್ಯೋತ್ಸವವನ್ನು ಆಚರಿಸಿ ಮಕ್ಕಳ ಜತೆ ಮೈಸೂರಿನಲ್ಲಿ ತಾವೇ ಬಸ್ ಚಲಾಯಿಸುವ ಮೂಲಕ 1ರೌಂಡ್ ಹಾಕಿಕೊಂಡು ಬಂದಿದ್ದರು ಶಿವ ರಾಜ್ಕುಮಾರ್…
ಇನ್ನು ಶಕ್ತಿಧಾಮದಲ್ಲಿರುವ ಮಕ್ಕಳಿಗೆ ಜಗತ್ತು ಗೊತ್ತಾಗಬೇಕು ಎನ್ನುವ ನಿಟ್ಟಿನಲ್ಲಿ ಗೀತಾ ಶಿವರಾಜ್ ಕುಮಾರ್ ಹಾಗೂ ಶಿವರಾಜ್ ಕುಮಾರ್ ಮೊದಲ ಬಾರಿಗೆ ಅವರನ್ನು ಬೆಂಗಳೂರಿಗೆ ಕರೆದುಕೊಂಡು ಬಂದಿದ್ದಾರೆ….ಮೊದಲಿಗೆ ಪುನೀತ್ ಸಮಾಧಿಗೆ ಭೇಟಿ ಕೊಟ್ಟು ನಂತರ ವಿಧಾನಸೌಧ ಹಾಗೆ ಬೆಂಗಳೂರಿನ ಸುತ್ತಮುತ್ತ ಒಂದು ರೌಂಡ್ ಹಾಕಿಸಲು ನಿರ್ಧಾರ ಮಾಡಿದ್ದಾರೆ ..
ಇಂದು ಬೆಂಗಳೂರಿನಲ್ಲೇ ಮಕ್ಕಳನ್ನು ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡಿರುವ ಶಿವಣ್ಣ ನಾಳೆ ನಂದಿಹಿಲ್ಸ್ ಗೆ ಮಕ್ಕಳನ್ನ ಕರೆದುಕೊಂಡು ಹೋಗಲು ತಯಾರಿ ಮಾಡಿದ್ದಾರೆ