ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಜೇಮ್ಸ್ ಸಿನಿಮಾತೆರೆಗೆ ಬರಲು ಸಿದ್ದವಾಗ್ತಿದೆ…ಸಿನಿಮಾ ಡಬ್ಬಿಂಗ್ ಬಾಕಿ ಇರುವಾಗಲೇ ಪುನೀತ್ ಅಕಾಲಿಕ ಮರಣ ಹೊಂದಿದ್ರು..ಸಿನಿಮಾವನ್ನ ಪುನೀತ್ ರಾಜ್ಕುಮಾರ್ ಹುಟ್ಟುಹಬ್ಬದಂದು ಬಿಡುಗಡೆ ಮಾಡಲು ಚಿತ್ರತಂಡ ತಯಾರಿ ಮಾಡಿಕೊಳ್ತಿದ್ದಾರೆ…

ಸದ್ಯ ಸಿನಿಮಾದಲ್ಲಿನ ಪುನೀತ್ ರಾಜ್ಕುಮಾರ್ ಪಾತ್ರಕ್ಕೆ ಶಿವರಾಜ್ ಕುಮಾರ್ ಧ್ವನಿ ನೀಡಿದ್ದಾರೆ. ಈ ಬಗ್ಗೆ ಮಾತನಾಡಿರೋ ಶಿವಣ್ಣ ನಿನ್ನೆ ಜೀಮ್ಸ್ ಸಿನಿಮಾಗೆ ಡಬ್ ಮಾಡಿದ್ದೇನೆ.. ವಾಯ್ಸ್ ಕೊಡೋದು ಬಹಳ ಕಷ್ಟವಾಯ್ತು…ಏನೋ ನನ್ನಿಂದ ಆದ ಪ್ರಯತ್ನ ಮಾಡಿದ್ದೀನಿ….

ಇನ್ನೊಂದು ಆಕ್ಟರ್ ಒಳಗೆ ಹೋಗಿ ಡಬ್ ಮಾಡೋದು ತುಂಬಾ ಕಷ್ಟ…ಒಬ್ಬ ನಾಯಕನಾಗಿ ಅವರ ವಾಯ್ಸ್ ಇಮಿಟೇಟ್ ಮಾಡೋದು ಕಷ್ಟ…ಅದರಲ್ಲೂ ಅಪ್ಉ ವಾಯ್ಸ್ ಗೆ ಮ್ಯಾಚ್ ಕೊಡೋದು ಬಹಳ ಕಷ್ಟವಾಯ್ತು…ನೋಡಬೇಕು ಎಲ್ಲರಿಗೂ ಇಷ್ಟ ಆಗುತ್ತೆ ಅಂತ ಅನ್ಸುತ್ತೆ..ಜೇಮ್ಸ್ ಇಡೀ ಸಿನಿಮಾಗೆ ವಾಯ್ಸ್ ಕೊಟ್ಟಿದ್ದೀನಿ.ಎರಡೂವರೆ ದಿನ ವಾಯ್ಸ್ ಡಬ್ ಮಾಡಿದ್ದೀನಿ ಎಂದಿದ್ದಾರೆ…ಜೇಮ್ಸ್ ಸಿನಿಮಾ ಮಾರ್ಚ್ 17ರಂದು ತೆರೆಗೆ ಬರ್ತಿದ್ದು ಚೇತನ್ ಕುಮಾರ್ ನಿರ್ದೇಶನ ಮಾಡಿದ್ದಾರೆ…