ಸಂದೇಶ್ ಪ್ರೊಡಕ್ಷನ್ಸ್ ನೂತನ ಚಿತ್ರದಲ್ಲಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್.
ವಿಭಿನ್ನ ಕಥಾಹಂದರದ ಈ ಚಿತ್ರಕ್ಕೆ ಶಿವಣ್ಣನ ಕುಚಿಕು ಚಿ.ಗುರುದತ್ ನಿರ್ದೇಶನ .
ಕನ್ನಡ ಚಿತ್ರರಂಗಕ್ಕೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ಹೆಸರಾಂತ ಸಂದೇಶ್ ಪ್ರೊಡಕ್ಷನ್ಸ್ ಸಂಸ್ಥೆ ಮೂಲಕ ನೂತನ ಚಿತ್ರವೊಂದು ನಿರ್ಮಾಣವಾಗಲಿದೆ. ರಾಷ್ಟ್ರಪ್ರಶಸ್ತಿ ವಿಜೇತ ಸಂದೇಶ್ ನಾಗರಾಜ್ ಅರ್ಪಿಸುವ ಈ ಚಿತ್ರವನ್ನು ಸಂದೇಶ್ ಎನ್ ನಿರ್ಮಿಸುತ್ತಿದ್ದಾರೆ. ಈಗಾಗಲೇ ಅನೇಕ ಚಿತ್ರಗಳನ್ನು ನಿರ್ದೇಶನ ಮಾಡಿರುವ ಚಿ.ಗುರುದತ್ ನಿರ್ದೇಶನದ ಈ ಚಿತ್ರದ ನಾಯಕರಾಗಿ ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ನಟಿಸುತ್ತಿದ್ದಾರೆ.

ಶಿವಣ್ಣನ ಸಿನಿಮಾ ಅಂತಷ್ಟೆ ಫೈನಲ್ ಆಗಿದ್ದು, ಸಿನಿಮಾದ ತಾಂತ್ರಿಕ ವರ್ಗ, ಸ್ಟಾರ್ ಕಾಸ್ಟ್ ಬಗ್ಗೆ ಇನ್ನಷ್ಟೆ ಫೈನಲ್ ಆಗಬೇಕಿದೆ, ಹಂತ ಹಂತವಾಗಿ ಈ ಬಗ್ಗೆ ಮಾಹಿತಿ ನೀಡೋದಾಗಿ ನಿರ್ಮಾಪಕರು ಹೇಳಿದ್ದಾರೆ. ಸದ್ಯ ಸಿನಿಮಾ ಚಟುವಟಿಕೆಗಳು ಮೊದಲಿನಂತೆ ಶುರುವಾಗ್ತಾ ಇದ್ದು, ಶಿವಣ್ಣ ಕೂಡ ಬ್ಯಾಕ್ ಟು ಬ್ಯಾಕ್ ಸಿನಿಮಾಗಳಿಗೆ ಓಕೆ ಹೇಳ್ತಾ ಇದ್ದಾರೆ. ಇದು ಗೆಳೆಯ ಚಿ.ಗುರುದತ್ ಸಿನಿಮಾ ಆಗಿರೋದ್ರಿಂದ ಇನ್ನಷ್ಟು ಸ್ಪೆಷಲ್ ಆಗಿರೋದ್ರಲ್ಲಿ ಡೌಟೇ ಇಲ್ಲ.