ಕನ್ನಡ ಚಿತ್ರರಂಗದ ಹಿರಿಯ ನಟ ಅಶೋಕ್ ರಾವ್ ಇನ್ನಿಲ್ಲ…300ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಅಭಿನಯ ಮಾಡಿ ಅಪಾರ ಅಭಿಮಾನಿಗಳಿಂದ ಮೆಚ್ಚುಗೆ ಗಳಿಸಿದ ನಟ ಕಳೆದ ಹದಿನೈದು ದಿನಗಳಿಂದ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿದ್ದ ನಟ ಇಂದು ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ …
ಅಶೋಕ್ ಸಾಕಷ್ಟು ದಿನಗಳಿಂದ ಕ್ಯಾನ್ಸರ್ ಕಾಯಿಲೆಗೆ ಚಿಕಿತ್ಸೆ ಪಡೆಯುತ್ತಿದ್ದರು ನಿನ್ನೆ ಕೂಡ ಚಿಕಿತ್ಸೆ ಪಡೆದುಕೊಂಡು ಬಂದು ಮನೆಯಲ್ಲಿ ವಿಶ್ರಾಂತಿ ಪಡೆದಿದ್ದರು ಆದ್ರೆ ಮಧ್ಯರಾತ್ರಿ 12.30ಕ್ಕೆ ಕೊನೆಯುಸಿರೆಳೆದದ್ದಾರೆ….
ಡಾ. ರಾಜ್ ಕುಮಾರ್ ರ ಪರಶುರಾಮ್ ಚಿತ್ರದ ಮೂಲಕ ಖಳನಾಯಕನಾಗಿ ಅಶೋಕ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ರು…ಅಣ್ಣಾವ್ರೇ ಕರೆದು ಪರಶುರಾಮ್ ಚಿತ್ರದಲ್ಲಿ ಖಳನಾಯಕನ ಪಾತ್ರ ಮಾಡಿಸಿದ್ದರಂತೆ ಅನಂತರ ಮುನ್ನೂರಕ್ಕೂ ಹೆಚ್ಚು ಚಿತ್ರದಲ್ಲಿ ನಟಿಸಿದರು ಅಶೋಕ್ ತಮ್ಮ ಧ್ವನಿಯಿಂದಲೇ ಅನೇಕ ಪಾತ್ರಗಳನ್ನ ಪಡೆದುಕೊಂಡಿದ್ರು ಅಶೋಕ್