ತಲುಗಿನ ಪುಷ್ಪ, ತಮಿಳಿನ ಅಸುರನ್ ಸಿನಿಮಾಗಳನ್ನ ನೋಡಿ ಮೆಚ್ಚಿದ ಕನ್ನಡಿಗರಿಗೆ ಆ ಥರವೇ ನೈಜವಾಗಿ ನಡೆಯೋ ಕಥೆಯ ಸಿನಿಮಾಗಳು ಕನ್ನಡದಲ್ಲೂ ಬರ್ತಾವ ಅನ್ನಿಸ್ತಾ ಇತ್ತು, ಇದಕ್ಕೆ ಉತ್ತರವಾಗಿ ಕಳೆದೊಂದು ವರ್ಷದಿಂದ Raw ಕಥೆ, ಸ್ಕ್ರೀನ್ ಪ್ಲೇ ಇರೋ ಸಿನಿಮಾಗಳು ಅಬ್ಬರಿಸ್ತಾ ಇವೆ. ಇದೇ ಸಾಲಿನಲ್ಲಿ ಕನ್ನಡ ಸಿನಿಮಾ ಲವರ್ಸ್ಗೆ ಥ್ರಿಲ್ ಆಗಿಸೋಕೆ ಬರ್ತಿದೆ ಮತ್ತೊಂದು ಕನ್ನಡ ಸಿನಿಮಾ ಗೌಳಿ, ಇದರ ಟೀಸರ್ ನೋಡಿದವರಿಗೇನೆ ಒಂದು ಲೆವೆಲ್ಗೆ ಥ್ರಿಲ್ ಆಗಿರೋದು ಸುಳ್ಳಲ್ಲ..!
ಒಂದು ಲಾಂಗ್ ಬ್ರೇಕ್ ನ ನಂತ್ರ ಕಮ್ ಬ್ಯಾಕ್ ಮಾಡಿರೋ ಶ್ರೀನಗರ ಕಿಟ್ಟಿ ಗೌಳಿಯಲ್ಲಿ ಘೀಳಿಟ್ಟಿದ್ದಾರೆ. ಸಿನಿಮಾನೂ ಟೀಸರ್ ಥರವೇ ಇದ್ದರೇ, ಇದು ಬೆಸ್ಟ್ ಕಮ್ ಬ್ಯಾಕ್ ಆಗೋದ್ರಲ್ಲಿ ಅನುಮಾನವಿಲ್ಲ. ಗೌಳಿ ಸಿನಿಮಾದಲ್ಲಿ ಶ್ರೀನಗರ ಕಿಟ್ಟಿಗೆ ನಾಯಕಿಯಾಗಿ ಪಾವನ ನಟಿಸಿದ್ದು, ರಂಗಾಯಣ ರಘು, ಶರತ್ ಲೋಹಿತಾಶ್ವ, ಯಶ್ ಶೆಟ್ಟಿ, ಕಾಕ್ರೋಚ್ ಸುಧಿ ಮುಂತಾದವರು ನಟಿಸಿದ್ದಾರೆ.

ನೈಜ ಘಟನೆಗಳನ್ನ ಆಧರಿಸಿ ಮಾಡಿರೋ ಈ ಸಿನಿಮಾಕ್ಕೆ ಸೂರ ಆಕ್ಷನ್ ಕಟ್ ಹೇಳ್ತಾ ಇದ್ದು,ರಘು ಸಿಂಘಂ ಹಣ ಹಾಕಿದ್ದಾರೆ. ಮೊದಲ ಬಾರಿಗೆ ಶಶಾಂಕ್ ಶೇಷಗಿರಿ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ಸಂದೀಪ್ ವಳ್ಳೂರಿ ಚೊಚ್ಚಲ ಸಿನಿಮಾದ ಕ್ಯಾಮರಾ ವರ್ಕ್ ಕಮಾಲ್ ಮಾಡುವಂತಿದೆ. ವಿಕ್ರಂ ಮೋರ್ ಹಾಗೂ ಅರ್ಜುನ್ ರಾಜ್ ಸ್ಟಂಟ್ಸ್ ಸಿನಿಮಾಕ್ಕಿದೆ.