ಕರುನಾಡಿನ ಕಿಚ್ಚ .ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಿನಿಮಾರಂಗಕ್ಕೆ ಕಾಲಿಟ್ಟು ಇಪ್ಪತ್ತಾರು ವರ್ಷಗಳು ಕಳೆದಿವೆ …ಈ ವಿಶೇಷ ಸಂದರ್ಭದಲ್ಲಿ ಸಿನಿಮಾ ತಾರೆಯರು, ಸ್ನೇಹಿತರು ಹಾಗೂ ಅಭಿಮಾನಿಗಳು ಕಿಚ್ಚನಿಗೆ ಶುಭ ಹಾರೈಸುವ ಮೂಲಕ ಬೆಸ್ಟ್ ವಿಷಸ್ ಹೇಳಿದ್ದಾರೆ …

ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ಉಡುಗೊರೆಯನ್ನು ಮಾಡಿ ಸಮಾಜಿಕ ಜಾಲತಾಣದ ಮೂಲಕವೇ ಅವರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ.. ಇನ್ನೂ ಸುದೀಪ್ ಪತ್ನಿ ಪ್ರಿಯಾ ಕೂಡ ವಿಶೇಷವಾಗಿ ಫೋಟೋವೊಂದನ್ನು ಶೇರ್ ಮಾಡುವ ಮೂಲಕ ಕಿಚ್ಚನಿಗೆ ಇಪ್ಪತ್ತಾರು ವರ್ಷ ಕಂಪ್ಲೀಟ್ ಮಾಡಿರುವುದಕ್ಕೆ ಶುಭಕೋರಿದ್ದಾರೆ …

ಇನ್ನು ಕಿಚ್ಚನ ಜೀವನದಲ್ಲಿ ಯಾವುದೇ ವಿಶೇಷ ದಿನವಿದ್ದರೂ ತಮ್ಮ ಮಗಳಿಂದ ಸರ್ಪ್ರೈಸ್ ಗಿಫ್ಟ್ ಸಿಗುತ್ತದೆ…ಅದರಂತೆಯೇ ಇಂಡಸ್ಟ್ರಿಯಲ್ಲಿ 26ವರ್ಷ ಪೂರೈಸಿರೋದಕ್ಕೆ ಪುತ್ರಿ ಶಾನ್ವಿ ತನ್ನ ತಂದೆಗಾಗಿ ವಿಶೇಷವಾಗಿರುವ ಪೈಂಟಿಂಗ್ ಅನ್ನು ಮಾಡಿ ಗಿಫ್ಟ್ ಮಾಡಿದ್ದಾರೆ ..ಎಲ್ಲರಿಗೂ ತಿಳಿದಿರುವಂತೆ ಸುದೀಪ್ ಪುತ್ರಿ ಶಾನ್ವಿ ಒಳ್ಳೆಯ ಆರ್ಟಿಸ್ಟ್ ಅಪ್ಪನಿಗೆ ಸೋಷಿಯಲ್ ಮಿಡಿಯಾದಲ್ಲಿ ಬಳಸಲು ಡಿಪಿ ಪೋಟೋವನ್ನ ತನ್ನ ಕೈಯಾರೆ ಡಿಸೈನ್ ಮಾಡಿ ಕೊಟ್ಟಿದ್ದಾರೆ ..ಕಿಚ್ಚ ಆ ಫೋಟೋವನ್ನ ಸೋಷಿಯಲ್ ಮಿಡಿಯಾದಲ್ಲಿ ಶೇರ್ ಮಾಡಿಕೊಂಡು ಸಂತಸ ವ್ಯಕ್ತ ಪಡಿಸಿದ್ದಾರೆ …