ನಿನ್ನೆಯವರೆಗೂ ಕುಂದಾಪುರದ ರವಿಬಸ್ರೂರು ಸ್ಟೂಡಿಯೋದಲ್ಲಿ ಕೆಜಿಎಫ್ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ನಲ್ಲಿ ಬ್ಯುಸಿಯಾಗಿದ್ದ ಟೀಮ್, ಇವತ್ತು ಬೆಳಗ್ಗೆಯಿಂದಲೇ ದೇಗುಲಗಳ ದರ್ಶನ ಶುರು ಮಾಡಿದೆ, ಬೆಳಗ್ಗೆ ಕುಂದಾಪುರದ ಆನೆಗುಡ್ಡೆ ಮಹಾಗಣಪತಿಯ ದೇವಸ್ಥಾನಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ರು.
ನಂತ್ರ ಕೊಲ್ಲೂರಿಗೆ ತೆರಳಿ ಮೂಕಾಂಬಿಕೆಯ ಆಶೀರ್ವಾದ ಪಡೆದ್ರು.
ಕೊಲ್ಲೂರಿನಿಂದ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥನಿಗೆ ನಮೋ ಎಂದರು, ಇಷ್ಟೆಲ್ಲಾ ದೇಗುಲ ದರ್ಶನಕ್ಕೆ ಕಾರಣ, ಇಂದಿನಿಂದಲೇ ಬಹುನಿರೀಕ್ಷಿತ ಕೆಜಿಎಫ್-2 ಸಿನಿಮಾದ ಅಧಿಕೃತ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ.
ರಾಕಿಭಾಯ್ ಜೊತೆಗೆ ಸಿನಿಮಾ ನಿರ್ಮಾಪಕ ವಿಜಯ ಕಿರಗಂದೂರ್, ನಿರ್ದೇಶಕ ಪ್ರಶಾಂತ್ ನೀಲ್, ಸಂಗೀತ ನಿರ್ದೇಶಕ ರವಿ ಬಸ್ರೂರ್ ಹಾಗೂ ಇಡೀ ಸಿನಿಮಾ ತಂಡ ದೇಗುಲಗಳಿಗೆ ತೆರೆಳಿ ಕೆಜಿಎಫ್-2 ಯಶಸ್ವಿಯಾಗಲೆಂದು ಪ್ರಾರ್ಥನೆ ಸಲ್ಲಿಸಿದ್ದಾರೆ. ಈಗಾಗ್ಲೆ ಏ.14ಕ್ಕೆ ಸಿನಿಮಾ ರಿಲೀಸ್ ಅಂತ ಅನೌನ್ಸ್ ಮಾಡಿದ್ದ ತಂಡ, ಕೋವಿಡ್ನಿಂಧಾಗಿಯೂ ಯಾವುದೇ ಬದಲಾವಣೆ ಮಾಡಿಲ್ಲ, ಹಾಗಾಗಿ ಇಂದಿನಿಂದ ಪ್ರಚಾರ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಸಿನಿಮಾ ಟೀಮ್ ನಿರ್ಧರಿಸಿದೆ. ಇದೊಂದು ಪ್ಯಾನ್ ಇಂಡಿಯಾ ಸಿನಿಮಾ ಆಗಿರೋದ್ರಿಂದ ಪ್ರಚಾರಕ್ಕೂ ಬಹಳ ಕಾಲಾವಕಾಶ ಬೇಕಿದ್ದು, ಎರಡೂವರೆ ತಿಂಗಳಿಗೆ ಮೊದಲೇ ಪ್ರಮೋಷನ್ ಆರಂಭಿಸಲಾಗಿದೆ.