20 ಕೋಟಿ ವೀಕ್ಷಣೆ ಕಂಡಿರೋ ಹಿಂದಿ ಪೊಗರು
ಧ್ರುವಾ ಡಬ್ಬಿಂಗ್ ಸಿನಿಮಾಕ್ಕೂ ಭರ್ಜರಿ ರೆಸ್ಪಾನ್ಸ್
ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸದ್ಯ ಮಾರ್ಟಿನ್ ಸಿನಿಮಾದ ಚಿತ್ರೀಕರಣದಲ್ಲಿ ಬಿಜಿಯಾಗಿದ್ದಾರೆ… ಧ್ರುವ ಅಭಿನಯದ ಪೊಗರು ಸಿನಿಮಾ ಕನ್ನಡ,ತೆಲುಗು, ತಮಿಳು ಸೇರಿದಂತೆ ಹಿಂದಿ ಭಾಷೆಯಲ್ಲಿಯೂ ತೆರೆಕಂಡಿತ್ತು…ಕನ್ನಡ ಹೊರತುಪಡಿಸಿ ಬೇರೆ ಭಾಷೆಯಲ್ಲಿ ಸಿನಿಮಾಗೆ ಹೆಚ್ಚೆನೂ ರೆಸ್ಪಾನ್ಸ್ ಸಿಗದೇ ಇದ್ದರೂ ಯೂಟ್ಯೂಬ್ ನಲ್ಲಿ ಪೊಗರು ಸಿನಿಮಾ ದಾಖಲೆ ಸೃಷ್ಟಿಮಾಡಿದೆ…. ಪೊಗರು ಸಿನಿಮಾದ ಮೂಲಕ ಧ್ರುವಾ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚಿದ್ರು… ಆದ್ರೆ ಈಗ ಧ್ರುವಾ ಬಿಟೌನ್ ಗೆ ನೇರವಾಗಿ ಕಾಲಿಡದೇನೆ ದಾಖಲೆಯನ್ನು ಸೃಷ್ಟಿ ಮಾಡಿದ್ದಾರೆ… ಹೌದು ಧ್ರುವ ಅಭಿನಯದ ಪೊಗರು ಸಿನಿಮಾದ ಹಿಂದಿ ಡಬ್ಬಿಂಗ್ ವರ್ಷನ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿದ್ದು ಸಿನಿಮಾ ಅಪ್ ಲೋಡ್ ಆಗಿ ಕೆಲವೇ ತಿಂಗಳುಗಳಲ್ಲಿ 200 ಮಿಲಿಯನ್ ವೀಕ್ಷಣೆ ಪಡೆದುಕೊಂಡಿದೆ…

ಕಳೆದ ವರ್ಷ ಫೆಬ್ರವರಿಯಲ್ಲಿ ಪೊಗರು ಸಿನಿಮಾ ತೆರೆಕಂಡಿತ್ತು…ಅದಾದ ನಂತರ ಏಪ್ರಿಲ್ ತಿಂಗಳಲ್ಲಿ ಹಿಂದಿ ವರ್ಷನ್ ಯೂಟ್ಯೂಬ್ ನಲ್ಲಿ ಬಿಡುಗಡೆಯಾಗಿತ್ತು.. ಕೆಲವೇ ಕೆಲವು ತಿಂಗಳಲ್ಲಿ ಇನ್ನೂರು ಮಿಲಿಯನ್ ಜನರು ಈ ಸಿನಿಮಾವನ್ನ ವೀಕ್ಷಣೆ ಮಾಡಿದ್ದಾರೆ …ಈ ಮೂಲಕ ದಾಖಲೆಗಳ ಸರದಾರನಾದ ಧ್ರುವ ಹೆಸರಲ್ಲಿ ಮತ್ತೊಂದು ರೆಕಾರ್ಡ್ ದಾಖಲಾಗಿದೆ.