ಎಸ್ ಎಸ್ ರಾಜಮೌಳಿ ನಿರ್ದೇಶನದ, ಜ್ಯೂನಿಯರ್ ಎನ್ ಟಿ ಆರ್ ಹಾಗೂ ರಾಮ್ ಚರಣ್ ತೇಜಾ ಅಭಿನಯದ ಭಾರತದ ಬಹುನಿರೀಕ್ಷಿತ ಸಿನಿಮಾ RRR ಬಿಡುಗಡೆಗೆ ಹೊಸ ಡೇಟ್ ಫಿಕ್ಸ್ ಆಗಿದೆ. ಈ ಮೊದಲು ಮಾರ್ಚ್ 18 ಅಥವ ಎಪ್ರಿಲ್ 28ಕ್ಕೆ ರಾಜಮೌಳಿ & ಟೀಮ್ RRR ರಿಲೀಸ್ ಮಾಡೋ ಪ್ಲಾನ್ ಮಾಡಿತ್ತು. ಆದ್ರೆ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ ಕೊನೆಯ ಸಿನಿಮಾಗಳಲ್ಲಿ ಒಂದಾಗಿರುವ ʻಜೇಮ್ಸ್ʼ ಮಾರ್ಚ್ 17ಕ್ಕೆ ಅಪ್ಪು ಬರ್ತ್ ಡೇ ಪ್ರಯುಕ್ತ ರಿಲೀಸ್ ಮಾಡಲು ಚಿತ್ರತಂಡ ಈಗಾಗ್ಲೇ ಸಜ್ಜಾಗಿದೆ. ಹೀಗಾಗಿ ರಾಜಮೌಳಿ ಅಪ್ಪುಗಾಗಿ ತಮ್ಮ ದಾರಿ ಬದಲಿಸಿದ್ದಾರೆ.

ದೇಶದಲ್ಲಿ ಕೊರೋನಾ ಪ್ರಕರಣಗಳು ಕೊಂಚ ಕೊಂಚವೇ ಕಡಿಮೆಯಾಗುತ್ತಿವೆ.ಕೆಲ ರಾಜ್ಯಗಳಲ್ಲಿ 100 ಸೀಟು ಭರ್ತಿಗೆ ಅವಕಾಶ ನೀಡಲಾಗಿದೆ,. ಹೀಗಾಗಿ ರಾಜಮೌಳಿ ಗಟ್ಟಿ ಮನಸು ಮಾಡಿ ರಿಲೀಸ್ ಡೇಟ್ ಅನೌನ್ಸ್ ಮಾಡಿದ್ದಾರೆ. ಜ್ಯೂನಿಯರ್ ಎನ್ಟಿಆರ್, ರಾಮ್ ಚರಣ್ ತೇಜ ಜೊತೆಗೆ ಆಲಿಯಾ ಭಟ್, ಅಜಯ್ ದೇವಗನ್ ಸೇರಿದಂತೆ ದೊಡ್ಡ ತಾರಾಬಳಗವನ್ನೇ ಹೊಂದಿರುವ RRR ಸಿನಿಮಾಕ್ಕೇ ಪ್ರೇಕ್ಷಕರು ಕಾತುರದಿಂದ ಕಾಯ್ತಾ ಇದ್ದಾರೆ.

RRR ಸಂಪೂರ್ಣ ಕಾಲ್ಪನಿಕ ಸಿನಿಮಾವಾಗಿದ್ದು, ಬರೋಬ್ಬರಿ 450 ಕೋಟಿ ರೂಪಾಯಿ ವೆಚ್ಚದಲ್ಲಿ ಡಿವಿವಿ ದಾನಯ್ಯ ನಿರ್ಮಾಣ ಮಾಡಿದ್ದು, ಎಂ ಎಂ ಕೀರವಾಣಿ ಸಂಗೀತ ನೀಡಿದ್ದಾರೆ. ಕರ್ನಾಟಕದಲ್ಲಿ RRR ಸಿನಿಮಾವನ್ನು ಪ್ರತಿಷ್ಠಿತ ಕೆವಿಎನ್ ಪ್ರೊಡಕ್ಷನ್ ವಿತರಣೆ ಮಾಡಲಿದೆ. ಕರ್ನಾಟಕದ ಸಿನಿಮಾ ವಿತರಕರ ಸಂಘ ಈಗಾಗಲೇ ಜೇಮ್ಸ್ ಬಿಡುಗಡೆಯಾಗುವ ವಾರ, ಬೇರೆ ಯಾವುದೇ ಸಿನಿಮಾ ರಿಲೀಸ್ ಮಾಡದಿರಲು ನಿರ್ಧರಿಸಿತ್ತು. ಅದರಂತೆ ಕರ್ನಾಟಕದ ವಿತರಣೆ ಪಡೆದಿದ್ದ ಕೆವಿಎನ್ ಪ್ರೊಡಕ್ಷನ್ಸ್ ಅಪ್ಪು ಮೇಲಿನ ಗೌರವದಿಂದ ಹೊಸ ಡೇಟ್ ಗಾಗಿ ಮನವಿ ಸಲ್ಲಿಸಿತ್ತು. ಈಗ ಸಿನಿಮಾ ಟೀಮ್ ವಿಶ್ವಾದ್ಯಂತ ಇದೇ ಡೇಟ್ಗೆ ರಿಲೀಶ್ ಮಾಡಲು ನಿರ್ಧರಿಸಿದೆ.