ಕೊವಿಡ್-೧೯ರ ನಿಯಮಗಳಲ್ಲಿ ಎಲ್ಲವಕ್ಕೂ ರಿಯಾಯಿತಿ ನೀಡಿ, ಮತ್ತೆ ಎಂದಿನಂತೆ ಕಾರ್ಯ ನಿರ್ವಹಿಸಲು ಸೂಚನೆ ನೀಡಿರುವ ಸರ್ಕಾರ ಚಿತ್ರಮಂದಿರಗಳು ಮಾತ್ರ ಶೇ.೫೦ ರಷ್ಟು ಮಾತ್ರ ಭರ್ತಿ ಮಾಡಬೇಕು ಅನ್ನೋದನ್ನ ಮುಂದುವರೆಸಿದೆ. ಈ ಕುರಿತು ಇವತ್ತು ಸಾವಿತ್ರಿ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ನಟ ವಿಜಯ್ ರಾಘವೇಂದ್ರ ಮಾತನಾಡಿ, ಸರ್ಕಾರದ ನಿರ್ಧಾರ, ಉದ್ದೇಶಗಳ ಕುರಿತು ಏನ್ ಹೇಳೊದೊ ಅಂತ ಗೊತ್ತಿಲ್ಲ.ಸ್ವಲ್ಪ ತಾಳ್ಮೆಯಿಂದ ಇದ್ದರೆ ಕಂಡಿತ ನಮಗೂ ರಿಲ್ಯಾಕ್ಸ್ ಸಿಗುತ್ತೆ.
ಚಿತ್ರಮಂದಿರಗಳಲ್ಲಿ 100% ಸೀಟು ಭರ್ತಿಗೆ ಅನುಮತಿ ಸಿಗುತ್ತೆ. ಸರ್ಕಾರಕ್ಕೆ ಸಿನಿಮಾ ಕಾರ್ಮಿಕರ ಕಷ್ಟ-ನಷ್ಟವೂ ಗೊತ್ತಿದೆ. ಹಾಗಾಗಿ ಆದಷ್ಟು ಬೇಗ ಚಿತ್ರಮಂದಿರಗಳಿಗೂ 100% ಭರ್ತಿಗೆ ಅವಕಾಶ ಮಾಡಿಕೊಡಬೇಕು ಅಂತ ಮನವಿ ಮಾಡ್ತೇನೆ ಅಂದಿದ್ದಾರೆ. ನಾವು ಜಾವಾಬ್ದಾರಿಯಿಂದ ವರ್ತಿಸಬೇಕು, ಎಲ್ಲರೂ ಹುಷಾರಾಗಿದ್ರೆ, ಆದಷ್ಟು ಬೇಗ ನಮಗೂ ಥಿಯೇಟರ್‌ಗಳನ್ನ ಸಂಪೂರ್ಣವಾಗಿ ತೆರೆಯಲು ಸರ್ಕಾರ ಅನುಮತಿ ಕೊಡುತ್ತೆ ಅನ್ನೋ ನಂಬಿಕೆ ನಂಗಿದೆ ಅಂದಿದ್ದಾರೆ ಚಿನ್ನಾರಿಮುತ್ತ.