ಚಿತ್ರಮಂದಿರ, ಜಿಮ್, ಸ್ವಿಮ್ಮಿಂಗ್ ಫೂಲ್ ಹೊರತು ಪಡಿಸಿ ಬಹುತೇಕ ಎಲ್ಲ ಕಡೆ ಎಂದಿನಂತೆ ಕಾರ್ಯ ಚಟುವಟಿಕೆಗಳು ನಡೆಯುತ್ತಿದ್ದು, ಚಿತ್ರಮಂದಿರಗಳಿಗೂ ಶೇ.100 ಭರ್ತಿಗೆ ಅವಕಾಶ ನೀಡುವಂತೆ ಚಲನಚಿತ್ರ ವಾಣಿಜ್ಯ ಮಂಡಳಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮನವಿ ಸಲ್ಲಿಸಿತ್ತು. ಹಾಗಾಗಿ ನಾಳೆಯೇ ಸ್ಯಾಂಡಲ್ ವುಡ್ ಗೆ ಗುಡ್ ನ್ಯೂಸ್ ಸಿಗೋ ಸಾಧ್ಯತೆ ಇದೆ. ನಿನ್ನೆ ಸಿಎಂರನ್ನು ಭೇಟಿ ಮಾಡಿದ್ದ ವಾಣಿಜ್ಯ ಮಂಡಳಿ ಪಾದಾಧಿಕಾರಿಗಳಿಗೆ, 100% ಸೀಟು ಭರ್ತಿಗೆ ಅವಕಾಶ ಆಗದಿದ್ದರೆ, ಚಿತ್ರರಂಗದ ಮೇಲಾಗೋ ಪರಿಣಾಮಗಳ ಬಗ್ಗೆ ಪಟ್ಟಿ ಮಾಡಿಕೊಂಡು ಬರಲು ತಿಳಿಸಿದ್ದಾರೆ.
ನಾಳೆ ಮತ್ತೆ ಸಿಎಂ ರನ್ನ ಭೇಟಿಯಾಗುವಾಗ ಚಿತ್ರರಂಗದ ಸಮಸ್ಯೆಗಳು ಹಾಗು ಬಿಡುಗಡೆಗೆ ಸಿದ್ಧವಿರೋ ಸಿನಿಮಾ ಲೀಸ್ಟ್ ಅನ್ನ ಕೊಡಲಿದೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ.. ನಾಳೆ ಸಿಎಂ ಸಮಯ ಕೊಟ್ಟ ತಕ್ಷಣ ಭೇಟಿ ಮಾಡಲಿರೋ ಫಿಲ್ಮ್ ಚೇಂಬರ್ ಪದಾಧಿಕಾರಿಗಳು, ಈ ಕುರಿತು ಸಿಎಂ ಅವರಿಗೆ ಮನವರಿಕೆ ಮಾಡಿಕೊಡಲಿದ್ದಾರೆ. ನಂತರ ಚಿತ್ರರಂಗದ ಎಲ್ಲಾ ಸಮಸ್ಯೆಗಳನ್ನ ಅವಲೋಕಿಸಿ, 100% ಸೀಟು ಭರ್ತಿಗೆ ಅವಕಾಶ ಬೇಕೋ ಬೇಡವೋ ಎಂದು ತೀರ್ಮಾನಿಸಲಿದ್ದಾರೆ ಮುಖ್ಯಮಂತ್ರಿಗಳು. ಮಂಡಳಿಯ ಸದಸ್ಯರು ಸಿಎಂ ನಾಳೆಯೇ ಒಪ್ಪಿಗೆ ಸೂಚಿಸಲಿದ್ದಾರೆ ಅನ್ನೋ ವಿಶ್ವಾಸ ಹೊಂದಿದ್ದಾರೆ.