ರ್ಯಾಪರ್ ಆಗಿ, ಮ್ಯೂಸಿಕ್ ಡೈರೆಕ್ಟರ್ ಆಗಿ, ಸಿಂಗ್ ಆಗಿ, ಬಿಗ್ ಬಾಸ್ ವಿನ್ನರ್ ಆಗಿ ಜನ ಮನ್ನಣೆ ಗಳಿಸಿರೋ ಚಂದನ್ ಶೆಟ್ಟಿ ಈಗ ಮೊದಲ ಬಾರಿಗೆ ಬೆಳ್ಳಿತೆರೆಗೆ ಹೀರೋ ಆಗಿ ಎಂಟ್ರಿ ಕೊಡ್ತಾ ಇದ್ದಾರೆ. ಈ ಸಿನಿಮಾದ ಟೈಟಲ್ಲೇ ʼಎಲ್ರ ಕಾಲೆಳಿಯುತ್ತೆ ಕಾಲʼ ಉಪ್ಪಿ-೨ ಸಿನಿಮಾದ ಹಾಡಿನ ಇನ್ಪಿರೇಷನ್‌ನೊಂದಿಗೆ ಸಿನಿಮಾಕ್ಕೆ ಈ ಟೈಟಲ್ ಇಟ್ಟಿದ್ದಾರೋ ಅಥವ ಯಾರ ಕಾಳನ್ನ ಎಳೆಯೋಕೆ ಈ ಟೈಟಲ್ ಇಟ್ಟಿದ್ದಾರೋ ಗೊತ್ತಿಲ್ಲ ಕಾಮಿಡಿ ಆಕ್ಟರ್ ಆಗಿ ಗುರುತಿಸಿಕೊಂಡಿರೋ ನಿರ್ದೇಶಕ ಸುಜಯ್ ಶಾಸ್ತ್ರಿ.

ಗೋಕುಲ ಎಂಟರ್‌ಟೈನರ್ಸ್ ಬ್ಯಾನರ್ ನಡಿ ನಿರ್ಮಾಣ ಆಗ್ತಾ ಈ ಸಿನಿಮಾಕ್ಕೆ ಉಶಾ ಗೋವಿಂದರಾಜು ನಿರ್ಮಾಪಕರು. ಸ್ಪೆಷಾಲಿಟಿ ಏನಪ್ಪ ಅಂದ್ರೆ ಚಂದನ್ ಶೆಟ್ಟಿ ಅಭಿನಯಿಸಿರೋ ಈ ಚಿತ್ರಕ್ಕೆ ಪ್ರವೀಣ್-ಪ್ರದೀಪ್ ಅನ್ನೋ ಸಂಗೀತ ನಿರ್ದೇಶಕ ದ್ವಯರು ಮ್ಯೂಸಿಕ್ ಕಂಪೋಸ್ ಮಾಡ್ತಿದ್ದಾರೆ. ಚಂದನ್ ಶೆಟ್ಟಿ ಅವ್ರ ರೆಟ್ರೋ ಲುಕ್, ಈ ಟೈಟಲ್ ಎಲ್ಲ ನೋಡ್ತಿದ್ರೆ, ಸಿನಿಮಾದಲ್ಲಿ ಮಜಾ ಎಂಟರ್‌ಟೈನ್‌ಮೆಂಟ್‌ನ ಪ್ಯಾಕೇಜೇ ಇದೆ ಅನ್ನೋದು ಗೊತ್ತಾಗುತ್ತೆ. ಸದ್ಯಕ್ಕೆ ಸಿನಿಮಾ ಟೀಮ್‌ನ ಮುಂದಿನ ಅಪ್‌ಡೇಟ್ ವರೆಗೂ ಕಾಯೋಣ..