ನಟಿ ನೀತು ಸರ್ಕಾರಿ ಶಾಲೆ ಉಳಿಸಿ ಅಭಿಯಾನದಲ್ಲಿ ಈಗಾಗ್ಲೆ ರಾಜ್ಯದ ಮೂಲೆ ಮೂಲೆಯ ಹಳ್ಳಿಗಳಲ್ಲಿ ಮುಚ್ಚೇ ಹೋಗಲು ಅಣಿಯಾಗಿರುವ ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದು, ಜೀವ ತುಂಬಿ, ಶಾಲೆಗಳನ್ನ ಉಳಿಸುವ ಕಾರ್ಯದಲ್ಲಿ ನಿರತರಾಗಿರೋ ನೀತು, ಇಂದು ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ಕರ್ಕುಂಜೆ ಅನ್ನೋ ಊಡಿನಲ್ಲಿರುವ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಬಣ್ಣ ಬಳಿದು ಮರುಜೀವ ನೀಡಿದ್ದಾರೆ.

ಇದು ಕನ್ನಡ ಮನಸ್ಸುಗಳ ಪ್ರತಿಷ್ಠಾನದ ಸಹೋಯೋಗದೊಂದಿಗೆ ನೀತು ಮರುಜೀವ ನೀಡುತ್ತಿರುವ 11ನೇ ಶಾಲೆ. ನೀತು ಜೊತೆಗೆ ಸುಮಾರು 60ಕ್ಕೂ ಹೆಚ್ಚು ಸ್ವಯಂಸೇವಕರು, ಇವತ್ತು ಬೆಳಗ್ಗೆ 7ಘಂಟೆಯಿಂದ ಕೆಲಸ ಮಾಡಿ ಈ ಶಾಲೆಗೆ ಬಣ್ಣ ಹಚ್ಚಿ ಚಂದವಾಗಿಸಿದ್ದಾರೆ.. ಈ ಖುಷಿಯನ್ನ ನೀತು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡು ಖುಷಿ ಪಟ್ಟಿದ್ದಾರೆ.