ಕಳೆದ ಸಂಕ್ರಾಂತಿ ಹಬ್ಬದಂದು ಉದಯ ಟಿವಿಯಲ್ಲಿ ಪವರ್ಸ್ಟಾರ್ ಪುನೀತ್ ರಾಜ್ಕುಮಾರ್ ಅಭಿನಯದ ಬ್ಲಾಕ್ ಬಸ್ಟರ್ ಸಿನಿಮಾ ʼಯುವರತ್ನʼ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಆಗಿತ್ತು. ಅಪ್ಪು ಅಭಿಮಾನಿಗಳಿಗೆ ಸಂಕ್ರಾಂತಿ ಹಬ್ಬದ ಜೊತೆಗೆ ಯುವರತ್ನ ಸಿನಿಮಾ ನೋಡೋದೆ ಹಬ್ಬವಾಗಿತ್ತು. ಯುವರತ್ನ ಟಿವಿಯಲ್ಲಿ ಫಸ್ಟ್ ಟೈಮ್ ಟೆಲಿಕಾಸ್ಟ್ ಆಗ್ತಾ ಇರೋ ಬಗ್ಗೆ ತುಂಬಾನೇ ನಿರೀಕ್ಷೆ ಕೂಡ ಇತ್ತು. ಅದರಂತೆ ಯುವರತ್ನ ಬರೊಬ್ಬರಿ 12.5 TVR ಅಂದ್ರೆ ಸರಿಸುಮಾರು 90 GRP ಯನ್ನು ಗಳಿಸಿದೆ. ಈ ಹಿಂದೆ ದೊಡ್ಮನೆ ಹುಡುಗ 21, ರಾಜಕುಮಾರ 19 TVR ಗಳಿಸಿ ದಾಖಲೆ ನಿರ್ಮಿಸಿದ್ದವು, ಈಗ ಯುವರತ್ನ ಸರದಿ.

ರೇಟಿಂಗ್ ನಲ್ಲಿ ಈವಾರ ಉದಯ ಟಿವಿ 2ನೇ ಸ್ಥಾನಕ್ಕೆ
ಜಸ್ಟ್ ಯುವರತ್ನ ಸಿನಿಮಾ ಪ್ರಸಾರ ಮಾಡಿದ್ದ ಕಾರಣಕ್ಕೆ ರೇಟಿಂಗ್ ಟೇಬಲ್ ನಲ್ಲಿ ನಾಲ್ಕನೆ ಸ್ಥಾನದಲ್ಲಿದ್ದ ಉದಯ ಟಿವಿ ಈ ವಾರ 2ನೇ ಸ್ಥಾನಕ್ಕೇರಿದೆ, ಈ ಹಿಂದೆ ರಾಜಕುಮಾರ್ ಸಿನಿಮಾ ಪ್ರೀಮಿಯರ್ ಆದಾಗಲೂ ಇದೇ ರೀತಿ ಆಗಿತ್ತು. ಪುನೀತ್ ಸಿನಿಮಾ ಅಂದ್ರೆ ಹೇಗೆ ಕುಟುಂಬ ಸಮೇತರಾಗಿ ಹೋಗಿ ಥಿಯೇಟರ್ನಲ್ಲಿ ಜನ ಸಿನಿಮಾ ನೋಡ್ತಾರೋ, ಅದೇ ರೀತಿ ಮನೆಯಲ್ಲೂ ಮನೆಮಂದಿಯೆಲ್ಲಾ ಟಿವಿಯಲ್ಲಿ ಸಿನಿಮಾ ನೋಡ್ತಾರೆ. ಇದೇ ಕಾರಣಕ್ಕೆ ಪುನೀತ್ ಸಿನಿಮಾಗಳು ಟಿವಿಯಲ್ಲಿ ದಾಖಲೆಗಳನ್ನ ಬರೆಯುತ್ತವೆ. ಕನ್ನಡ ಟಾಪ್ 5 ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಸಿನಿಮಾಗಳಲ್ಲಿ ಅಪ್ಪು ಅಭಿನಯದ 3 ಸಿನಿಮಾಗಳಿವೆ. ಇದನ್ನ ಸದ್ಯಕ್ಕೆ ಯಾರು ಬ್ರೇಕ್ ಮಾಡಲು ಸಾಧ್ಯವಿಲ್ಲ ಅಂತಾರೆ ತಜ್ಞರು.