ಈಗಾಗಲೇ ಸ್ಯಾಂಡಲ್ ವುಡ್ ನಲ್ಲಿ ಮೈಲುಗಲ್ಲು ಸಾಧಿಸಿರುವಂತಹ ಟಗರು ಹಾಗೂ ಸಲಗ ಸಿನಿಮಾದಲ್ಲಿ ಸಹ ನಿರ್ದೇಶಕನಾಗಿ ಕೆಲಸ ಮಾಡಿದಂತಹ ಅಭಿ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾವನ್ನ ಆರಂಭ ಮಾಡಿದ್ದಾರೆ ..
ಟಗರು ಸಿನಿಮಾದಲ್ಲಿ ಸೂರಿ ಗರಡಿಯಲ್ಲಿ ಬೆಳೆದ ಅಭಿ ವಿಭಿನ್ನ ಕಥಾಹಂದರವನ್ನು ಇಟ್ಟುಕೊಂಡು ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದ್ದಾರೆ ..ಚಿತ್ರಕ್ಕೆ ಕಿಣಿ ಕ್ರಿಸ್ಟೋಫರ್ ಬಂಡವಾಳ ಹಾಕಿದ್ದು ಚರಣ್ ರಾಜ್ ಸಂಗೀತ ನೀಡುತ್ತಿದ್ದಾರೆ… ಇನ್ನು ಟಗರು ಹಾಗೂ ಸಲಗ ಸಿನಿಮಾಗೆ ಸಂಭಾಷಣೆ ಬರೆದಿದ್ದ ಮಾಸ್ತಿ ಅವರೇ ಈ ಚಿತ್ರಕ್ಕೂ ಡೈಲಾಗ್ ರೈಟರ್ …ಇನ್ನೂ ಸಲಗ ಸಿನಿಮಾದ ಕ್ಯಾಮೆರಾಮೆನ್ ಶಿವಸೇನಾ ಈ ಚಿತ್ರಕ್ಕೂ ಸಿನಿಮಾಟೊಗ್ರಫಿ ಮಾಡಲಿದ್ದಾರೆ ..
ಸದ್ಯ ಸ್ಕ್ರಿಪ್ಟ್ ಪೂಜೆ ಮಾಡಿ ಪ್ರೀ ಪ್ರೊಡಕ್ಷನ್ ಕೆಲಸ ಮುಗಿಸಿರುವ ತಂಡ ಮುಂದಿನ ತಿಂಗಳು ಕೊನೆಯ ವಾರದಿಂದ ಚಿತ್ರೀಕರಣ ಆರಂಭ ಮಾಡಲಿದ್ದಾರೆ …ನಾಳೆ ಸಿನಿಮಾದ ಟೈಟಲ್ ರಿವಿಲ್ ಆಗಲಿದ್ದು ಅಭಿ ಚೊಚ್ಚಲ ಚಿತ್ರಕ್ಕೆ ಸುಕ್ಕಾ ಸೂರಿ ಸಾಥ್ ನೀಡಲಿದ್ದಾರೆ …ಇಲ್ಲಿ ತನಕ ಸಿನಿಮಾ ಬಗ್ಗೆ ಯಾವುದೇ ವಿಚಾರವನ್ನು ಬಿಟ್ಟುಕೊಡದ ಸಿನಿಮಾತಂಡ ನಾಳೆ ಟೈಟಲ್ ರಿವಿಲ್ ಮಾಡುವದರ ಜೊತೆಗೆ ಕಲಾವಿದರ ಪರಿಚಯವನ್ನು ಮಾಡಿಕೊಡುತ್ತಾ ಅನ್ನೋದನ್ನ ಕಾದು ನೋಡಬೇಕಾಗಿದೆ…