ಕರುನಾಡ ರಾಜರತ್ನ ಪುನೀತ್ ರಾಜ್‌ಕುಮಾರ್ ದೈಹಿಕವಾಗಿ ಅಭಿಮಾನಿಗಳಿಂದ ದೂರಾಗಿ ಅದಾಗ್ಲೆ ಮೂರು ತಿಂಗಳಾಗ್ತಾ ಇದೆ. ಪ್ರತಿನಿತ್ಯ ಬೆಂಗಳೂರಿನ ಕಂಠೀರವ ಸ್ಟುಡಿಯೋ ಆವರಣದಲ್ಲಿರುವ ಅಪ್ಪು ಸ್ಮಾರಕಕ್ಕೆ ಭೇಟಿ ನೀಡುವ ಅಭಿಮಾನಿಗಳ ಸಂಖ್ಯೆ ಏರ್ತಾನೆ ಇದೆ. ಇವತ್ತು ಗಣರಾಜ್ಯೋತ್ಸವ ಆಗಿರೋ ಕಾರಣ ರಜರ ಇದೆ. ಶಾಲೆಗಳು ಕೂಡ ಕೊರೊನಾ ಕಾರಣದಿಂದ ಗಣರಾಜ್ಯೋತ್ಸವ ಆಚರಿಸದೆ ರಜೆ ನೀಡಿವೆ. ಈ ಬಾರಿ ಗಣರಾಜ್ಯೋತ್ಸವವನ್ನು ವಿಶಿಷ್ಟವಾಗಿ ಆಚರಿಸುವ ಮನಸ್ಸು ಮಾಡಿರುವ ಅಭಿಮಾನಿಗಳು ಅಪ್ಪು ಸ್ಮಾರಕ್ಕವನ್ನು ಭೇಟಿ ಮಾಡುತ್ತಿದ್ದಾರೆ.
ಬೆಳಗ್ಗೆಯಿಂದಲೇ ಬೆಂಗಳೂರು ಸೇರಿದಂತೆ ದೂರದ ಊರುಗಳಿಂದ ಬಂದ ಅಪ್ಪು ಅಭಿಮಾನಿಗಳು ಸಾಲುಗಟ್ಟಿ ಪುನೀತ್ ಸಮಾಧಿಗೆ ನಮನ ಸಲ್ಲಿಸುತ್ತಿದ್ದಾರೆ. ಎಲ್ಲಾ ವಯೋಮಾನದ ಅಭಿಮಾನಿಗಳನ್ನ ಹೊಂದಿರೋ ಪುನೀತ್ ಅವ್ರನ್ನ ರಿಪಬ್ಲಿಕ್ ಡೇ ದಿನ ವಿಶಿಷ್ಟವಾಗಿ ಅಪ್ಪು ಸಮಾಧಿ ಬಳಿ ಆಚರಿಸುತ್ತಿದ್ದಾರೆ. ಗಣರಾಜ್ಯೋತ್ಸವದ ಪ್ರಯುಕ್ತ ರಿಲೀಸ್‌ಆದ ಜೇಮ್ಸ್ ಹೊಸ ಪೋಸ್ಟರ್ ಅನ್ನು ಹಿಡಿದು ಸ್ಮಾರಕದ ಬಳಿ ಹರ್ಷೋದ್ಘಾರ ಮಾಡುತ್ತಿದ್ದಾರೆ ಅಭಿಮಾನಿಗಳು.