ಅಪ್ಪು ಸಮಾಧಿಗೆ ದರ್ಶನಕ್ಕೆ ಬಂದಿದ್ದ ಪುಟ್ಟ ಬಾಲಕಿ ಮಾತನಾಡದೇ, ಸಮಾಧಿ ನೋಡುತ್ತಾ ಅಳುತ್ತಿದ್ದಳು, ಈ ಬಾಲಕಿಯನ್ನ ನೋಡಿದ ಅವ್ರ ತಾಯಿ ಕೂಡ ದುಃಖ ತಡೆಯಲಾರದೆ ಅತ್ತು ಬಿಟ್ಟರು. ಆ ಮಗು ನೋಡಿ ಎಲ್ಲರ ಕಣ್ಣು ಒದ್ದೆಯಾಗಿದ್ದು ಸುಳ್ಳಲ್ಲ..!
ಅಪ್ಪು ಸಮಾಧಿ ಬಳಿ ಬಂದ ಅಕ್ಕನ ಮಗಳು ಧನ್ಯಾ ರಾಮ್ ಕುಮಾರ್, ಅಪ್ಪು ಅವ್ರ ಜೇಮ್ಸ್ ಪೋಸ್ಟರ್ ನೋಡಿ, ಭಾವುಕರಾದ್ರು. ತಮ್ಮ ದುಃಖ ತೋರಿಸಿಕೊಳ್ಳಲಾಗದೇ ದೂರವೇ ಸರಿದು ಅಲ್ಲಿಂಧ ಹೊರಟು ಬಿಟ್ಟರು..!
ಪುನೀತ್ ತೀರಿಕೊಂಡಾಗ ಮಗುವಿಗೆ ಜಸ್ಟ್ 12ದಿನವಾಗಿತ್ತು, ನಾನವರ ಅಭಿಮಾನಿ ಅವತ್ತು ನೋಡಲಾಗಿಲ್ಲ ಹಾಗಾಗಿ ಇವತ್ತು ನನ್ ಮಗನ ಜೊತೆ ಬಂದಿರುವೆ ಅಂತ 3 ತಿಂಗಳ ಬಾಣಂತಿ ಹೇಳಿದ್ರು.
ಪುನೀತ್ ಸಮಾಧಿ ದರ್ಶನಕ್ಕೆ ಬಂದ ಲೇಡಿ ಅಭಿಮಾನಿಗಳು, ದುಃಖ ಕಳೆದುಕೊಳ್ಳುವ ಸಲುವಾಗಿ, ಜೇಮ್ಸ್ ಪೋಸ್ಟರ್‌ಗೆ ಆರತಿ ಮಾಡಿ, ತಮಟೆ ಏಟಿಗೆ ಕುಣಿದರು.