ಇತ್ತೀಚೆಗೆ ನಟಿ ರಾಗಿಣಿ ದ್ವಿವೇದಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೊ ಒಂದನ್ನ ಅಪ್‌ಲೋಡ್ ಮಾಡಿದ್ರು, ಈ ವಿಡಿಯೋದಲ್ಲಿ ಸೀರೆಯೊಟ್ಟ ರಾಗಿಣಿ ಕತ್ತಲ್ಲಿ ತಾಳಿ ಜೋರಾಗೇ ಜೋತಾಡ್ತಾ ಇತ್ತು. ಇದನ್ನು ಕಂಡು ರಾಗಿಣಿ ಯಾರಿಗೂ ಹೇಳದೇ ಕೇಳದೇ ಮದುವೆ ಆಗಿಬಿಟ್ರಾ ಅಂತ ಸುದ್ದಿಯಾಗಿತ್ತು. ಎದ್ದು ಕಾಣುವಂತೆ ತಾಳಿ ಹಾಕಿಕೊಂಡ ರಾಗಿಣಿ.ಈಗ ಇದಕ್ಕೆ ಕ್ಲಾರಿಟಿ ಕೊಟ್ಟಿದ್ದಾರೆ. ಇದು ತಮಿಳು ಸಿನಿಮಾ ಒಂದರ ಶೂಟಿಂಗ್ ಸಂದರ್ಭದಲ್ಲಿ ಮಾಡಿರೋ ವಿಡಿಯೋ, ಸಿನಿಮಾದ ಪಾತ್ರ ಒಂದಕ್ಕೆ ಕಟ್ಟಿಸಿಕೊಂಡಿದ್ದ ತಾಳಿ ಅಂತ ಹೇಳಿದ್ದಾರೆ.
ಈ ವಿಡಿಯೋ ಬಿಟ್ಟು ಎರಡು ದಿನ ಎಲ್ಲಾ ಕಡೆ ಸುದ್ದಿ ಓಡಾಡಿದ ಮೇಲೆ ಅಸಲಿ ಕಥೆ ಹೇಳಿದ ರಾಗಿಣಿ, ಸುದ್ದಿಯಾಗ್ಲೇ ಬೇಕು ಅಥ ಹೀಗೆ ಮಾಡಿದ್ರಾ ಗೊತ್ತಿಲ್ಲ ಆದ್ರೆ ರಾಗಿಣಿ ಕದ್ದು ಮುಚ್ಚಿ ಮದುವೆಯಾದ್ರಾ ಅನ್ನೋ ಸುದ್ದಿ ಮಾತ್ರ ಸಖತ್ ವೈರಲ್ ಆಗಿತ್ತು. ಕನ್ನಡದ ಜೊತೆಗೆ ಮಲಯಾಳಂ, ತಮಿಳು ಸಿನಿಮಾಗಳಲ್ಲಿ ರಾಗಿಣಿ ಸದ್ಯ ಬ್ಯುಸಿಯಾಗಿದ್ದಾರೆ. ಗಾಸಿಪ್ ಮಾಡಿಕೊಳ್ಳೋದ್ರಲ್ಲೂ ಕೂಡ..!