18.9 C
Bengaluru
Tuesday, February 7, 2023
spot_img

ರಮೇಶ್ ಅರವಿಂದ್ ರ inspiringಕಥೆಗಳು: ಮಾಸದ ಮಾತುಗಳು

ನಟ, ನಿರ್ದೇಶಕ, ನಿರ್ಮಾಪಕ, ನಿರೂಪಕರಾಗಿರುವ ರಮೇಶ್ ಅರವಿಂದ್ ಅವರು ಉತ್ತಮ ವಾಘ್ಮಿಯೂ ಹೌದು. ಈ ವರ್ಷ ಅವರು 2022ರನ್ನು ವಿಶೇಷವಾಗಿ ಬರಮಾಡಿಕೊಳ್ಳುತ್ತಿದ್ದಾರೆ. ‘ಮಾಸದ ಮಾತುಗಳು With Ramesh’ ಸರಣಿ ಮೂಲಕ ರಮೇಶ್ ಅವರು ಸ್ಫೂರ್ತಿದಾಯಕ ಮಾತುಗಳನ್ನು ಆಡಲಿದ್ದಾರಂತೆ. 12 ಎಪಿಸೋಡ್‌ಗಳಲ್ಲಿ ಈ ಸರಣಿ ಮೂಡಿ ಬರಲಿದೆ.

“ಪ್ರತಿ ವರ್ಷದಂತೆ ಈ ವರ್ಷವೂ ನಾನು ಹೊಸ ರೀತಿಯಲ್ಲಿ ನಿಮಗೆ 2022ರ ಶುಭಾಶಯ ಕೋರುತ್ತಿದ್ದೇನೆ. ಈ ಬಾರಿ, Storytelನಲ್ಲಿನ ಆಡಿಯೋ ಸರಣಿಯ ರೂಪದಲ್ಲಿ ನಾನು ಶುಭ ಹಾರೈಸುತ್ತಿದ್ದು, ನಿಮಗೊಂದಷ್ಟು ಭರವಸೆ ಒದಗಿಸುವ, ನಿಮ್ಮನ್ನು ಬುದ್ಧಿವಂತ, ಶ್ರೀಮಂತ ಮತ್ತು ಸಂತುಷ್ಟರನ್ನಾಗಿಸುವ ಕೆಲವು ಸಲಹೆಗಳನ್ನು ನೀಡಲೆಂದೇ ಅದನ್ನು ವಿನ್ಯಾಸಗೊಳಿಸಿದ್ದೇನೆ. ಈ ಹೊಸ ಬಗೆಯ ಡ್ರಿಂಕ್‌ನ ಮೂಲಕ, ನಾನೇ ಪ್ರೀತಿಯಿಂದ ತಯಾರಿಸಿದ 90 ನಿಮಿಷಗಳ ಈ ‘ಥಾಟ್ ಕಾಕ್‌ಟೇಲ್’ ಸವಿಯುವ ಮೂಲಕ ಈ ಹೊಸ ವರ್ಷವನ್ನು ಪ್ರಾರಂಭಿಸಿ. ಇದು ಮುಂಬರುವ ಅಮೋಘವಾದ ವರ್ಷವೊಂದಕ್ಕೆ ಸೊಗಸಾದ ಭೂಮಿಕೆ ಒದಗಿಸುವುದರಲ್ಲಿ ಯಾವ ಅನುಮಾವೂ ಇಲ್ಲ” ಎನ್ನುತ್ತಾರೆ ರಮೇಶ್ ಅರವಿಂದ್.

Storytel ಕನ್ನಡ ಕಟ್ಟಲಾಗ್ ನ ಭಾಗವಾಗಿ ಶ್ರೀಯುತ ರಮೇಶ್ ಅರವಿಂದ್ ಅವರ Storytel Original ಸರಣಿ ಶೀಘ್ರದಲ್ಲೇ ಹೊರಬರಲಿದೆ. “ಮಾಸದ ಮಾತುಗಳು with Ramesh ” ಹೆಸರಿನ ಈ ಸರಣಿಯಲ್ಲಿ ಕೇಳುಗರಿಗೆ ಬದುಕಿನುದ್ದಕ್ಕೂ ನೆರವಾಗಬಲ್ಲ ಅನೇಕ ವಿವೇಕಯುತ ಸಂಗತಿಗಳಿರಲಿದ್ದು , ಅದನ್ನು 2022 ರ 12 ತಿಂಗಳುಗಳ ಅವಧಿಯಲ್ಲಿ ಸಣ್ಣ ಕಂತುಗಳ ರೂಪದಲ್ಲಿ ಪ್ರಸ್ತುತಪಡಿಸಲಾಗುತ್ತದೆ .

“ಮಾಸದ ಮಾತುಗಳು with Ramesh” ಸರಣಿಯ ಎಲ್ಲಾ 12 ಎಪಿಸೋಡ್ ಗಳು 2 ನೇ ಜನವರಿ 2022 ರಂದು ಬಿಡುಗಡೆಯಾಗಲಿವೆ , ಕಥೆಗಳು , ಜೀವನದಿಂದ ಸ್ಫೂರ್ತಿ ಪಡೆದರೆ , ರಥ ಹೇಳುವ ಕಲೆ ವಾಚಕನ ಬದ್ಧತೆಯ ಪ್ರತಿಬಿಂಬವೇ ಸರಿ , ಶ್ರೀಯುತ ರಮೇಶ್ ಅರವಿಂದ್ ಬರೆದಿರುವ ಈ ಸರಣಿ ವಿಶೇಷವಾಗಿ Storytel ನಲ್ಲಿ ಮಾತ್ರ ಲಭ್ಯವಿರುತ್ತದೆ. ಅವರು ತಮ್ಮ ಅನುಭವಗಳು , ಬದುಕಿನಿoದ ಕಲಿತ ಪಾರಗಳು ಮತ್ತು ಜೀವನ ಮೌಲ್ಯಗಳನ್ನು ಬರಹಗಳ ರೂಪದಲ್ಲಿ ಹೆಣೆದಿದ್ದು, ನಮ್ಮ ನಿತ್ಯದ ಬದುಕಿನ ಸೊಬಗಿನ ಕುರಿತು ಮಾತನಾಡಿದ್ದಾರೆ . ಈ ಸರಣಿ ಎಲ್ಲಾ ವಯಸ್ಸಿನ ಓದುಗರಿಗೂ ಇಷ್ಟವಾಗಲಿದ್ದು , ಜೀವನವನ್ನು ಗೆಲುವಿನ ದೃಷ್ಟಿಕೋನದಿಂದ ನೋಡಲು ಪ್ರೇರಣೆ ಒದಗಿಸುವುದರಲ್ಲಿ ಯಾವ ಅನುಮಾನವೂ ಇಲ್ಲ.

‘ಮಾಸದ ಮಾತುಗಳು With Ramesh’ ಎಂಬ ಶೀರ್ಷಿಕೆಯಲ್ಲಿರುವ ‘ಮಾಸದ’ ಎಂಬ ಪದಕ್ಕೆ ಪ್ರತಿ ‘ತಿಂಗಳು’ ಎಂಬ ಅರ್ಥದ ಎಂಬ ಅರ್ಥವೂ ಇರುವುದರಿಂದ, ಶೀರ್ಷಿಕೆಯೂ ಕಾರ್ಯಕ್ರಮದಷ್ಟೇ ವಿಶಿಷ್ಟವಾಗಿದೆ. ಈ ತತ್ವವನ್ನು ಆಧರಿಸಿಯೇ ಸರಣಿ ವಿನ್ಯಾಸಗೊಳಿಸಲಾಗಿದ್ದು, ಇಲ್ಲಿನ ಕಲಿಕೆಗಳನ್ನು ಯಾರು ಬೇಕಾದರೂ ಮತ್ತು ಯಾವಾಗ ಬೇಕಾದರೂ ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬಹುದು. ಅಲ್ಲದೇ ರಮೇಶ್‌ ಅವರ ವಿಶೇಷ ಶೈಲಿಯ ವಾಚನದಲ್ಲಿ ಅವರ ಸ್ನೇಹಪರ ವ್ಯಕ್ತಿತ್ವ ಎದ್ದುಕಾಣುತ್ತಿದ್ದು, ಅವರು ನೇರವಾಗಿ ನಮ್ಮ ಜೊತೆಗೇ ಮಾತನಾಡುತ್ತಿದ್ದಾರೇನೂ ಎಂದೆನಿಸುವುದು ಖಂಡಿತ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles