22.9 C
Bengaluru
Friday, March 24, 2023
spot_img

‘KGF 2’ನಲ್ಲಿ ಹರ್ಷ ಮಾಸ್ಟರ್ ಡ್ಯಾನ್ಸ್..

ಕೆಜಿಎಫ್ ಸ್ಯಾಂಡಲ್‌ ವುಡ್‌ ನಲ್ಲಿ ಹೊಸ ಅಲೆಯನ್ನೇ ಸೃಷ್ಟಿಸಿ, ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಹೊಸ ಹವಾ ಕ್ರಿಯೇಟ್ ಮಾಡಿದ ಸಿನಿಮಾ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಕೆಜಿಎಫ್: ಚಾಪ್ಟರ್ 1’. ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್: ಚಾಪ್ಟರ್ 1’ ಸೂಪರ್ ಡ್ಯೂಪರ್ ಹಿಟ್ ಆಯ್ತು. ಇದೀಗ ಎಲ್ಲರ ಕಣ್ಣು ‘ಕೆಜಿಎಫ್: ಚಾಪ್ಟರ್ 2’ ಮೇಲಿದೆ. ಬಹುನಿರೀಕ್ಷಿತ ‘ಕೆಜಿಎಫ್​: ಚಾಪ್ಟರ್​ 2’. 2022 ಏಪ್ರಿಲ್​ 14ಕ್ಕೆ ಚಿತ್ರ ರಿಲೀಸ್​ ಆಗಲಿದೆ.

ಸದ್ಯಕ್ಕೆ ನಮಗೆ ಸಿಕ್ಕಿರುವ ಅಪ್ಡೇಟ್ ಪ್ರಕಾರ ಕೆಜಿಎಫ್ 2 ಚಿತ್ರದ ಒಂದು ಸಾಂಗ್ ಗೆ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ ಸ್ಯಾಂಡಲ್ ವುಡ್ ನ ಹರ್ಷ ಮಾಸ್ಟರ್. ಮೆಹಬೂಬಾ ಹೇ ಮೆಹಬೂಬಾ ಅನ್ನೋ ಹಾಡಿಗೆ ಹರ್ಷ ಮಾಸ್ಟರ್ ಕೊರಿಯೋಗ್ರಾಫ್ ಮಾಡುತ್ತಿದ್ದಾರೆ, ಯಶ್ – ಶ್ರೀನಿಧಿ ಶೆಟ್ಟಿ ಈ ಹಾಡಿನಲ್ಲಿ ಹೆಜ್ಜೆ ಹಾಕಿದ್ದಾರೆ..

ಜನವರಿಯಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ಹುಟ್ಟುಹಬ್ಬ ಇರುವುದರಿಂದ ಕೆಜಿಎಫ್ 2 ಬಗ್ಗೆ ಏನಾದರೂ ಅಪ್ಡೇಟ್ಸ್ ಸಿಗಲಿದೆ ಎಂದು ಯಶ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈ ಬಾರಿ ಏನು ಸರ್ಪೈಸ್ ಸಿಗಲಿವೆ ಎಂದು ಕಾದುನೋದಬೇಕಿದೆ.

****

Related Articles

Stay Connected

10,000FansLike
15,000FollowersFollow
5,000FollowersFollow
100,000SubscribersSubscribe

Latest Articles